ಬಜರಂಗದಳದ ಕಾರ್ಯಕ್ರಮದಲ್ಲಿ ಪೊಲೀಸ್ ವರಿಷ್ಠಾಧಿಕಾರಿ, ನಟ ಭಾಗಿ: ನೆಟ್ಟಿಗರಿಂದ ಟೀಕೆ

Prasthutha|

ಕೋಲಾರ: ಬಜರಂಗದಳದ ವತಿಯಿಂದ ನಡೆದ ಗಣೇಶ ವಿಸರ್ಜನಾ ಕಾರ್ಯಕ್ರಮದಲ್ಲಿ ಕೋಲಾರ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸಿನಿಮಾ ನಟರೊಬ್ಬರು ಭಾಗವಹಿಸಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.

- Advertisement -


ಕೋಲಾರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಹಾತ್ಮ ಗಾಂಧಿರಸ್ತೆಯಲ್ಲಿ ಬಜರಂಗದಳ ವತಿಯಿಂದ ಗಣೇಶ ವಿಸರ್ಜನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಇದರಲ್ಲಿ ಬಿಜೆಪಿ ಸಂಸದರಾದ ಮುನಿಸ್ವಾಮಿ, ನಗರಾಭಿವೃದ್ಧಿ ಅಧ್ಯಕ್ಷ ವಿಜಯ್ ಕುಮಾರ್, ಮಾಜಿ ಶಾಸಕ ವರ್ತೂರು ಪ್ರಕಾಶ್, ಸಿನಿಮಾ ನಟ ಡಾಲಿ ಧನಂಜಯ, ಕೋಲಾರ ಎಸ್.ಪಿ.ಡಿ.ದೇವರಾಜ್ ಭಾಗವಹಿಸಿದ್ದರು.


ಆರ್ ಎಸ್ ಎಸ್ ನ ಅಂಗಸಂಸ್ಥೆಯಾಗಿರುವ ಬಜರಂಗದಳ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಕೆಲಸ ಮಾಡುತ್ತಿದೆ. ಬಜರಂಗದಳದ ಹಲವು ಕಾರ್ಯಕರ್ತರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಂತಹ ಸಂಘಟನೆಯ ಕಾರ್ಯಕರ್ತರ ಜೊತೆ ವೇದಿಕೆ ಹಂಚಿಕೊಂಡರೆ ಸಮಾಜಕ್ಕೆ ಯಾವ ಸಂದೇಶ ಹೋಗುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -


ಈ ಬಗ್ಗೆ ವರ್ತೂರ್ ಪ್ರಕಾಶ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಕೋಲಾರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಹಾತ್ಮ ಗಾಂಧಿರಸ್ತೆಯಲ್ಲಿ ಬಜರಂಗದಳ ಸೇನಾ ವತಿಯಿಂದ ಗಣೇಶ ವಿಸರ್ಜನಾ ಕಾರ್ಯಕ್ರಮ ಈ ಸಂದರ್ಭದಲ್ಲಿ ಸಂಸದರಾದ ಮುನಿಸ್ವಾಮಿ ರವರು ಮುಖಂಡರಾದ ಬೆಗ್ಲಿ ಸೂರ್ಯಪ್ರಕಾಶ್ ರವರು ನಗರಾಭಿವೃದ್ಧಿ ಅಧ್ಯಕ್ಷರಾದ ವಿಜಯ್ ಕುಮಾರ್ ಅವರು. ಮತ್ತು ಅಣ್ಣಮ್ಮ ರಾಜೇಂದ್ರ ಅವರು ಬಜರಂಗದಳದ ಬಾಲಾಜಿ. ಅಪ್ಪಿ. ಬಾಬು.ಹಾಗು ಮುಖ್ಯ ಅತಿಥಿಯಾಗಿ ಸಿನಿಮಾ ನಟ ಡಾಲಿ ಧನಂಜಯ ರವರು ಜಿ.ಪಂ.ಸದಸ್ಯರಾದ ಬಂಕ್ ಮಂಜುರವರು ಹಾಜರಿದ್ದರು ಎಂದು ಪ್ರಕಾಶ್ ಬರೆದುಕೊಂಡಿದ್ದಾರೆ.



Join Whatsapp