ನಾವು ಅಧಿಕಾರಕ್ಕೆ ಬಂದರೆ ಬಜರಂಗದಳ ನಿಷೇಧಿಸಲ್ಲ: ಕಾಂಗ್ರೆಸ್ ಸಂಸದ ದಿಗ್ವಿಜಯ್ ಸಿಂಗ್

Prasthutha|

ಮಧ್ಯಪ್ರದೇಶ: 2024ರ ಚುನಾವಣೆಯಲ್ಲಿ ನಾವು ಅಧಿಕಾರಕ್ಕೆ ತಂದರೆ ಬಜರಂಗದಳವನ್ನು ನಿಷೇಧಿಸುವುದಿಲ್ಲ. ಆದರೆ ಗೂಂಡಾಗಳು ಮತ್ತು ಗಲಭೆಕೋರರನ್ನು ಬಿಡುವುದಿಲ್ಲ ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ರಾಜ್ಯಸಭಾ ಸಂಸದ ದಿಗ್ವಿಜಯ ಸಿಂಗ್ ಹೇಳಿದ್ದಾರೆ.

- Advertisement -


ರಾಜ್ಯ ರಾಜಧಾನಿ ಭೋಪಾಲ್ ನ ಪ್ರದೇಶ ಕಾಂಗ್ರೆಸ್ ಸಮಿತಿ (ಪಿಸಿಸಿ) ಕಚೇರಿಯಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಹನ ನಡೆಸುವಾಗ ಸಿಂಗ್ ಈ ಹೇಳಿಕೆ ನೀಡಿದ್ದಾರೆ.


ತಾವು ಅಧಿಕಾರಕ್ಕೆ ಬಂದರೆ ಬಜರಂಗದಳ ನಿಷೇಧ ಮಾಡುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ನಾವು ಬಜರಂಗದಳವನ್ನು ನಿಷೇಧಿಸುವುದಿಲ್ಲ, ಏಕೆಂದರೆ ಬಜರಂಗದಳದಲ್ಲಿಯೂ ಕೆಲವು ಒಳ್ಳೆಯ ಜನರು ಇರಬಹುದು. ಆದರೆ ಗಲಭೆ ಅಥವಾ ಹಿಂಸಾಚಾರದಲ್ಲಿ ಭಾಗಿಯಾಗಿರುವ ಯಾರನ್ನೂ ನಾವು ಬಿಡುವುದಿಲ್ಲ” ಎಂದು ಹೇಳಿದರು.

- Advertisement -


ಹಿಂದುತ್ವ ವಿಷಯದ ಬಗ್ಗೆ ಮಾತನಾಡಿದ ಸಿಂಗ್, “ನಾನು ಹಿಂದೂ, ನಾನು ಹಿಂದೂ ಮತ್ತು ಹಿಂದೂವಾಗಿಯೇ ಉಳಿಯುತ್ತೇನೆ. ನಾನು ಹಿಂದೂ ಧರ್ಮವನ್ನು ಅನುಸರಿಸುತ್ತೇನೆ ಮತ್ತು ನಾನು ಸನಾತನ ಧರ್ಮದ ಅನುಯಾಯಿ. ನಾನು ಎಲ್ಲ ಬಿಜೆಪಿ ನಾಯಕರಿಗಿಂತ ಉತ್ತಮ ಹಿಂದೂ. “ಭಾರತ ದೇಶವು ಹಿಂದೂ, ಮುಸ್ಲಿಂ, ಸಿಖ್ ಮತ್ತು ಕ್ರಿಶ್ಚಿಯನ್ ಎಲ್ಲರಿಗೂ ಸೇರಿದೆ. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ದೇಶವನ್ನು ವಿಭಜಿಸುವುದನ್ನು ನಿಲ್ಲಿಸಬೇಕು. ದೇಶದಲ್ಲಿ ಶಾಂತಿಯನ್ನು ಸ್ಥಾಪಿಸಿ, ಅದು ಶಾಂತಿಯಿಂದ ಮಾತ್ರ ಪ್ರಗತಿ ಸಾಧಿಸುತ್ತದೆ” ಎಂದು ಸಿಂಗ್ ಹೇಳಿದರು.

Join Whatsapp