ಹರಿದ್ವಾರ : ಮಸೀದಿಗೆ ದಾಳಿ ಮಾಡಿ ಪ್ರಾರ್ಥನೆಗೆ ಅಡ್ಡಿಪಡಿಸಿದ ಬಜರಂಗದಳ ಕಾರ್ಯಕರ್ತರು

Prasthutha|

ಹೊಸದಿಲ್ಲಿ: ಬಜರಂಗದಳ ಕಾರ್ಯಕರ್ತರು ಉತ್ತರಾಖಂಡದ ಹರಿದ್ವಾರ ಜಿಲ್ಲೆಯ ರೋಶ್ನಾಬಾದ್ ಪ್ರದೇಶದ ಮಸೀದಿಯೊಂದಕ್ಕೆ ಮುತ್ತಿಗೆ ಹಾಕಿದ್ದು, ಇಸ್ಲಾಂ ವಿರೋಧಿ ಘೋಷಣೆಗಳನ್ನು ಕೂಗಿ ಪ್ರಾರ್ಥನೆಗೆ ಅಡ್ಡಿಪಡಿಸುವ ವೀಡಿಯೋ ದೃಶ್ಯಾವಳಿಗಳು ವೈರಲಾಗಿದೆ.

- Advertisement -

ಪೊಲೀಸರು ಈ ಘಟನೆಯನ್ನು ಖಚಿತಪಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಸಿಡ್ಕುಲ್ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಮನೀಶ್ ನೇಗಿ, ಶುಕ್ರವಾರ ಮಸೀದಿಯಲ್ಲಿ ಜುಮಾ ಪ್ರಾರ್ಥನೆ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ. ಘಟನೆಯಲ್ಲಿ ಇನ್ನೂ ಯಾವುದೇ ಪ್ರಕರಣ ದಾಖಲಾಗಿಲ್ಲ, ಆದರೆ ತನಿಖೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಸೇರಿದಂತೆ ಸ್ಥಳೀಯ ಪೊಲೀಸರು ಮತ್ತು ಆಡಳಿತ ಅಧಿಕಾರಿಗಳು ಸ್ಥಳದಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಬಜರಂಗದಳದ ಕಾರ್ಯಕರ್ತರು ಮಸೀದಿಯ ವರಾಂಡಕ್ಕೆ ನುಗ್ಗಿ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲೇ ‘ಜೈ ಶ್ರೀ ರಾಮ್’, ‘ಹರಹರ ಮಹಾ ದೇವ್’, ‘ಭಾರತ್ ಮಾತಾ ಕಿ ಜೈ’ ಎಂಬ ಘೋಷಣೆಗಳನ್ನು ಕೂಗುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದು.

- Advertisement -

ವೀಡಿಯೋ ವೀಕ್ಷಿಸಿ…..

 ಜುಮಾ ಪ್ರಾರ್ಥನೆಗೆ ಅಡ್ಡಿಪಡಿಸುವ ಉದ್ದೇಶದಿಂದ ಪೂರ್ವ ಯೋಜಿತವಾಗಿ ಈ ದಾಳಿ ನಡೆಸಲಾಗಿದೆ ಎಂದು ಜಂಯಿಯ್ಯತುಲ್ ಉಲಮಾ ಎ ಹಿಂದ್ ಸದಸ್ಯ ಮೌಲಾನಾ ಆರಿಫ್ ಖಾಸಿಮಿ ಆರೋಪಿಸಿದ್ದಾರೆ.



Join Whatsapp