ಮಹಿಳಾ ದಿನದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ನುಗ್ಗಿ ದಾಂಧಲೆವೆಬ್ಬಿಸಿದ ಬಜರಂಗದಳ

Prasthutha|

ಶಿವಮೊಗ್ಗ: ಶಿವಮೊಗ್ಗದ ಹೋಟೆಲೊಂದರಲ್ಲಿ ಮಹಿಳಾ ದಿನದ ಅಂಗವಾಗಿ ಆಯೋಜಿಸಿದ್ದ ‘ಲೇಡೀಸ್ ಪಾರ್ಟಿ’ಗೆ ನುಗ್ಗಿದ ಬಜರಂಗ ದಳದ ಕಾರ್ಯಕರ್ತರು ದಾಂಧಲೆವೆಬ್ಬಿಸಿ ಕಾರ್ಯಕ್ರಮಕ್ಕೆ ತಡೆ ನೀಡಿದ ಘಟನೆ ನಡೆದಿದೆ.
ರಾಜೇಶ್ ಗೌಡ ನೇತೃತ್ವದಲ್ಲಿ ಬಲಪಂಥೀಯ ಹಿಂದುತ್ವ ಸಂಘಟನೆಯ ಸದಸ್ಯರು ಕುವೆಂಪು ರಸ್ತೆಯಲ್ಲಿರುವ ಹೋಟೆಲ್ ಕ್ಲಿಫ್ ಎಂಬೆಸಿ ಎದುರು ಶುಕ್ರವಾರ ಸಂಜೆ ಜಮಾಯಿಸಿ ಮಹಿಳಾ ದಿನಾಚರಣೆ ವಿರೋಧಿಸಿ ಪ್ರತಿಭಟನೆ ನಡೆಸಿದರು. ಮಾತ್ರವಲ್ಲ ಹೋಟೆಲ್’ಗೆ ನುಗ್ಗಿ ಕಾರ್ಯಕ್ರಮ ನಡೆಸದಂತೆ ಬೆದರಿಕೆ ಹಾಕಿ ಅಲ್ಲಿದ್ದವರನ್ನು ಹೊರಗೆ ಕಳುಹಿಸಿದರು ಎಂದು ತಿಳಿದುಬಂದಿದೆ.
“ಹಿಂದೂ ಸಂಸ್ಕೃತಿಗೆ ಹಾನಿ ಮಾಡುವ ಉದ್ದೇಶದಿಂದ ಕ್ಲಿಫ್ ಎಂಬೆಸಿ ಹೋಟೆಲ್’ನಲ್ಲಿ ಹುಡುಗಿಯರಿಗಾಗಿ ತಡರಾತ್ರಿ ಪಾರ್ಟಿ ಆಯೋಜಿಸಲಾಗಿತ್ತು. ಹುಡುಗಿಯರಿಗೆ ನೃತ್ಯ ಮಾಡಲು, ಕುಡಿಯಲು ವ್ಯವಸ್ಥೆ ಮಾಡಲಾಗಿತ್ತು ಮತ್ತು ಪಾರ್ಟಿಯಲ್ಲಿ ಡಿಜೆ ಸಹ ಹಾಕಿದ್ದರು. ಆದರೆ, ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಶಿವಮೊಗ್ಗದಲ್ಲಿ ಇಂತಹ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಸಂಘಟನೆಯ ಮುಖಂಡ ರಾಜೇಶ್ ಗೌಡ ಹೇಳಿದ್ದಾರೆ.

Join Whatsapp