ಕಾಶ್ಮೀರ ಕುರಿತು ಟ್ವೀಟ್ ಆರೋಪ; ಕೆ.ಎಫ್.ಸಿ ಮುಚ್ಚುವಂತೆ ಒತ್ತಾಯಿಸಿ ಬಜರಂಗದಳ ದಾಂಧಲೆ

Prasthutha|

ಸೂರತ್: ಕೆ.ಎಫ್. ಸಿ ಆಹಾರ ಸಂಸ್ಥೆ ಆಡಳಿತ ಮಂಡಳಿಯು ಕಾಶ್ಮೀರದ ಕುರಿತು ವಿವಾದಾತ್ಮಕ ಟ್ವೀಟ್ ಮಾಡಿದ್ದಾರೆ ಎಂದು ಆರೋಪಿಸಿ ಮಳಿಗೆಯನ್ನು ಮುಚ್ಚುವಂತೆ ಒತ್ತಾಯಿಸಿ ಬಜರಂಗದಳ ದಾಂಧಲೆ ನಡೆಸಿರುವ ಘಟನೆ ಅಹಮದಾಬಾದ್ ನಲ್ಲಿ ನಡೆದಿದೆ.

- Advertisement -

ಕೆ.ಎಫ್.ಸಿ ಆಹಾರ ಮಳಿಗೆಯನ್ನು ಮುಚ್ಚುವಂತೆ ಆಗ್ರಹಿಸಿ ಬಜರಂಗದಳದ ಸಂಚಾಲಕ ಜ್ವಾಲಿತ್ ಮೆಹ್ತಾ ಎಂಬಾತನ ನೇತೃತ್ವದಲ್ಲಿ ಕಾರ್ಯಕರ್ತರು ಆಹಾರ ಮಳಿಗೆಯ ಮುಂಭಾಗದಲ್ಲಿ ಜಮಾಯಿಸಿ, ಸಂಸ್ಥೆಯ ವಿರುದ್ಧ ಘೋಷಣೆ ಕೂಗಿ ದಾಂಧಲೆ ಆರಂಭಿಸಿದ್ದರು. ಈ ಸಭೆಯನ್ನುದ್ದೇಶಿಸಿ ಮಾತನಾಡಿದ ಜ್ವಾಲಿತ್ ಮೆಹ್ತಾ, ಕೆ.ಎಫ್.ಸಿ ಕಂಪೆನಿಗಳು ಕಾಶ್ಮೀರದ ಭಾರತದ ಭಾಗವೆಂದು ಮತ್ತೆ ಟ್ವೀಟ್ ಮಾಡದ ಹೊರತು ಈ ಸಂಸ್ಥೆಯಲ್ಲಿ ವ್ಯವಹಾರ ಮುಂದುವರಿಸಲು ಬಿಡುವುದಿಲ್ಲ ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಕೆ.ಎಫ್.ಸಿ ಆಹಾರ ಮಳಿಗೆಯನ್ನು ಗುರಿಯಾಗಿಸಿ ಬಜರಂಗದಳ ದಾಂಧಲೆ ನಡೆಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಜರಂಗದಳದ ನಡೆಗೆ ಪರ – ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ.



Join Whatsapp