ಪ್ರವಾದಿ ನಿಂದನೆ ವಿರುದ್ಧದ ಪ್ರತಿಭಟನೆ ವಿರೋಧಿಸಿ ಬಜರಂಗದಳದಿಂದ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ

Prasthutha|

ನವದೆಹಲಿ: ಇತ್ತೀಚಿಗೆ ದೇಶದ ಹಲವು ಭಾಗಗಳಲ್ಲಿ ಪ್ರವಾದಿ ಮುಹಮ್ಮದ್ ರ ಅವಹೇಳನದ ವಿಚಾರವಾಗಿ ನಡೆದ  ಪ್ರತಿಭಟನೆಯ ವೇಳೆ ನಡೆದ ಹಿಂಸಾಚಾರವನ್ನು ಖಂಡಿಸಿ ಬಜರಂಗದಳದ ಕಾರ್ಯಕರ್ತರು ಈ ವಾರ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್ ಪಿ) ಮಂಗಳವಾರ ಘೋಷಿಸಿದೆ.

- Advertisement -

ತನ್ನ ಯುವ ಘಟಕದ ಕಾರ್ಯಕರ್ತರು ಗುರುವಾರ ದೇಶಾದ್ಯಂತದ ಜಿಲ್ಲಾಡಳಿತದ ಪ್ರಧಾನ ಕಚೇರಿಯಲ್ಲಿ ಧರಣಿ ನಡೆಸಲಿದ್ದಾರೆ ಮತ್ತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಿದ್ದಾರೆ ಎಂದು ಆರ್ ಎಸ್ ಎಸ್ ಅಂಗಸಂಸ್ಥೆಯಾದ ವಿಎಚ್ ಪಿ ತಿಳಿಸಿದೆ.

ಪ್ರವಾದಿ ಮುಹಮ್ಮದ್ ಅವರ ಬಗ್ಗೆ ಈಗ ವಜಾಗೊಂಡಿರುವ ಬಿಜೆಪಿ ನಾಯಕರಾದ ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ಅವರ ವಿವಾದಾತ್ಮಕ ಹೇಳಿಕೆಗಳ ವಿರುದ್ಧ ದೆಹಲಿಯ ಜಾಮಾ ಮಸೀದಿಯ ಹೊರಗೆ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಜೂನ್ 10ರಂದು ಪ್ರತಿಭಟನೆಗಳು ಭುಗಿಲೆದ್ದಿದ್ದವು.



Join Whatsapp