ಹೆಚ್‌ಡಿ ರೇವಣ್ಣಗೆ ಜಾಮೀನು ಮಂಜೂರು

Prasthutha|

ಬೆಂಗಳೂರು: ಮಹಿಳೆ ಅಪಹರಣ ಪ್ರಕರಣದಲ್ಲಿ ಜೈಲಿನಲ್ಲಿರುವ ಹೊಳೆನರಸೀಪುರ ಜೆಡಿಎಸ್‌ ಶಾಸಕ ಹೆಚ್ ಡಿ ರೇವಣ್ಣರವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ.

- Advertisement -

,ರೇವಣ್ಣ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಧೀಶ ಸಂತೋಷ್‌ ಗಜಾನನ ಭಟ್‌, 5 ಲಕ್ಷಗಳ ಬಾಂಡ್ ನೀಡಬೇಕು.ಸಾಕ್ಷ್ಯಗಳ ನಾಶ, ಸಾಕ್ಷಿಗಳ ಮೇಲೆ ಒತ್ತಡ ಮಾಡಬಾರದು. ಪ್ರಕರಣ ದಾಖಲಾಗಿರುವ ಮಂಡ್ಯ ಜಿಲ್ಲೆಯ ಕೆ ಆರ್ ನಗರ ವ್ಯಾಪ್ತಿಗೆ ತೆರಳಬಾರದು. ಎಸ್‌ಐಟಿ ತನಿಖೆಗೆ ಸಹಕಾರ ನೀಡಬೇಕು ಎಂಬ ಷರತ್ತುಗಳನ್ನು ವಿಧಿಸಿ, ಜಾಮೀನು ಮಂಜೂರುಗೊಳಿಸಿದ್ದಾರೆ.

ಜಾಮೀನು ಆದೇಶ ಸಂಜೆ 6.45ಕ್ಕೆ ಹೊರಡಿಸಲಾಗಿದ್ದು, ರೇವಣ್ಣ ನಾಳೆ ಪರಪ್ಪನ ಅಗ್ರಹಾರ ಕಾರಾಗೃಹದಿಂದ ಬಿಡುಗಡೆಯಾಗಯವ ಸಾಧ್ಯತೆ ಇದೆ.

- Advertisement -

ರೇವಣ್ಣ ವಿರುದ್ಧ ಆರೋಪಗಳೆಲ್ಲಾ ಊಹಾಪೋಹ, ರಾಜಕೀಯ ಪ್ರೇರಿತ. ಈ ರೀತಿಯಲ್ಲಿ ಆಧಾರರಹಿತ ಆರೋಪಗಳನ್ನು ಪರಿಗಣಿಸಬಾರದು. ರೇವಣ್ಣ 6 ಸಲ ಎಂಎಲ್‌ಎ ಆಗಿದ್ದವರು, ಕಾನೂನಿಗೆ ಸದಾ ತಲೆಬಾಗುತ್ತಾರೆ. ಹೀಗಾಗಿ ಅವರಿಗೆ ಜಾಮೀನು ಮಂಜೂರು ಮಾಡಿ ಎಂದು ರೇವಣ್ಣ ಪರ ವಕೀಲ ನಾಗೇಶ್‌ ವಾದ ಮಾಡಿದ್ದರು.

Join Whatsapp