‘ಫ್ಲಡ್ ಜಿಹಾದ್’ ಆರೋಪ ಹೊರಿಸಿ ಬಂಧಿಸಲ್ಪಟ್ಟ ಐವರು ಮುಸ್ಲಿಮ್ ಯುವಕರಿಗೆ ಜಾಮೀನು

Prasthutha|

ಗುವಾಹಟಿ: ‘ಫ್ಲಡ್ ಜಿಹಾದ್’ ಆರೋಪದ ಅಡಿಯಲ್ಲಿ ಬಂಧಿಸಿ ಜೈಲಿಗಟ್ಟಿದ್ದ ಐವರು ಮುಸ್ಲಿಮ್ ಯುವಕರನ್ನು ನ್ಯಾಯಾಲಯ ಜಾಮೀನು ನೀಡಿದೆ.

- Advertisement -

ನಝೀರ್ ಹುಸೇನ್ ಲಷ್ಕರ್, ಕಾಬೂಲ್ ಖಾನ್, ರಿಪೋನ್ ಖಾನ್, ನಿತು ಅಹ್ಮದ್ ಮತ್ತು ರಾಜು ದೇಬ್ ಅವರನ್ನು ಜಾಮೀನಿನ ಮೇಲೆ ನ್ಯಾಯಾಲಯ ಬಿಡುಗಡೆ ಮಾಡಿದೆ.

ಅಸ್ಸಾಮ್’ನ ಗುವಾಹಟಿ ಸಿಲ್ಚಾರ್ ಎಂಬ ಹಿಂದೂ ಬಾಹುಳ್ಯ ಪ್ರದೇಶದಲ್ಲಿ ಉಂಟಾದ ಭೀಕರ ನೆರೆಗೆ ‘ಫ್ಲಡ್ ಜಿಹಾದ್’ ಎಂಬ ವಿನೂತನ ಹೆಸರು ನೀಡಿದ ಸಂಘಪರಿವಾರ ಪ್ರೇರಿತ ಶಕ್ತಿಗಳು, ಅಶಾಂತಿ ಸೃಷ್ಟಿಸಿದ ಪರಿಣಾಮ ಐವರು ಮುಸ್ಲಿಮರನ್ನು ಬಂಧಿಸಿ ಜೈಲಿಗಟ್ಟಲಾಗಿತ್ತು.

- Advertisement -

ಜುಲೈ 3 ರಂದು ಇವರನ್ನು ಬಂಧಿಸಿ ಜೈಲಿಗಟ್ಟಲಾಗಿತ್ತು. ಆರೋಪಿತ ಯುವಕರ ವಿರುದ್ಧ ಯಾವುದೇ ಸಾಕ್ಷ್ಯಗಳು ದೊರೆಯದ ಕಾರಣ ಜಾಮೀನು ನೀಡಿ ಬಿಡುಗಡೆಗೊಳಿಸಲಾಗಿದೆ.

ಇವರು, ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿರುವ ಅಸ್ಸಾಮ್’ನ ಬೇತುಕಂಡಿ ನಿವಾಸಿಗಳಾಗಿದ್ದಾರೆ.

ಮೇ ತಿಂಗಳಲ್ಲಿ ಅಸಾಮ್’ನಲ್ಲಿ ಭಾರೀ ಮಳೆಯ ಪರಿಣಾಮ ಪ್ರವಾಹ ಉಂಟಾಗಿತ್ತು. ಜೂನ್’ನಲ್ಲಿ ವಾಡಿಕೆಯಂತೆ ಅವಧಿಗೂ ಮುನ್ನ ಅಪಾರ ಪ್ರಮಾಣದ ಮಳೆ ಬಂದ ಕಾರಣ ಭೀಕರ ನೆರೆಗೆ ಸಾಕ್ಷಿಯಾಗಿತ್ತು. ಇದನ್ನೇ ನೆಪವಾಗಿಟ್ಟು ಬಲಂಥೀಯ ಮನಸ್ಥಿತಿ ಹೊಂದಿದ ಮಾಧ್ಯಮಗಳು, ಈ ನೆರೆಗೆ ಮುಸ್ಲಿಮರು ನೇರ ಕಾರಣ ಎಂದು ಸುದ್ದಿ ಪ್ರಸಾರ ಮಾಡಿದ್ದವು. ಅಲ್ಲದೆ ‘ಫ್ಲಡ್ ಜಿಹಾದ್’ ಎಂಬ ವಿನೂತನ ಶೈಲಿ ಹೆಸರನ್ನು ನೀಡಿ ಮುಸ್ಲಿಮರ ವಿರುದ್ಧ ದ್ವೇಷ ಹರಡುವ ಸುದ್ದಿಗಳನ್ನು ಬಿತ್ತರಿಸಿದ್ದವು.

ಪ್ರವಾಹ ಬರದಂತೆ ನಿರ್ಮಿಸಲಾಗಿದ್ದ ಒಡ್ಡುಗಳನ್ನು ಮುಸ್ಲಿಮರು ಕೆಡವಿ ಹಾಕಿದ್ದಾರೆ. ಇದರಿಂದಾಗಿ ನೆರೆ ಬರಲು ಪ್ರಮುಖ ಕಾರಣ ಎಂದು ಸುಳ್ಳು ಪ್ರಚಾರ ಬಿತ್ತರಿಸಿದ್ದವು. ಅಲ್ಲದೆ ಇದನ್ನು ‘ಫ್ಲಡ್ ಜಿಹಾದ್’ ಎಂದು ಕರೆದಿದ್ದವು.

Join Whatsapp