ರದ್ದಿ ಪೇಪರ್ ನಲ್ಲಿ ಮಾಂಸ ಪ್ಯಾಕ್ ಮಾಡಿದ ಮುಸ್ಲಿಮ್ ವ್ಯಕ್ತಿಗೆ ಎರಡು ವಾರಗಳ ಬಳಿಕ ಜಾಮೀನು

Prasthutha|

ನವದೆಹಲಿ: ಹಿಂದೂ ದೇವತೆಗಳ ಚಿತ್ರವಿತ್ತು ಎನ್ನಲಾದ ರದ್ದಿ ಪೇಪರ್ ನಲ್ಲಿ ಮಾಂಸ ಕಟ್ಟಿಕೊಟ್ಟ ಆರೋಪದಲ್ಲಿ ಸಂಭಾಲ್ ಪೊಲೀಸರಿಂದ ಬಂಧಿತರಾದ ತಾಲಿಬ್ ಹುಸೇನ್ ಅವರಿಗೆ ಎರಡು ವಾರಗಳ ಬಳಿಕ ನ್ಯಾಯಾಲಯ ಜಾಮೀನು ನೀಡಿದೆ.

- Advertisement -

ಆರೋಪಿ ಪರ ವಕೀಲ ಇಕಾದರ್ ಹುಸೇನ್ ಪಾಷಾ ಈ ಬಗ್ಗೆ ವಿವರ ನೀಡಿ, ಹುಸೇನ್ ವಿರುದ್ಧದ ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ ಎಂದು ತಿಳಿಸಿದರು.

ನಾವು ರದ್ದಿ ಪೇಪರ್ ನಲ್ಲಿ ಸುತ್ತಿ ಮಾಂಸವನ್ನು ಮಾರಾಟ ಮಾಡುವುದಿಲ್ಲ. ಅದಕ್ಕಾಗಿ ನಮ್ಮಲ್ಲಿ ಅಲ್ಯೂಮಿನಿಯಂ ಪಾಯಿಲ್ ಮತ್ತು ಬ್ಯಾಗ್ ಗಳಿವೆ. ಪತ್ರಿಕೆಯಲ್ಲಿ ಸುತ್ತಿ ರೊಟ್ಟಿಗಳನ್ನು ಮಾತ್ರ ನೀಡುತ್ತೇವೆ. ನಾವು ಯಾವುದೇ ದೇವರನ್ನು ಅವಮಾನಿಸಿಲ್ಲ ಎಂದು ತಿಳಿಸಿದ ಆರೋಪಿಯ ಮಗ, ತನ್ನ ತಂದೆಯನ್ನು ಉತ್ತರ ಪ್ರದೇಶ ಪೊಲೀಸರು ಗುರಿಪಡಿಸಿದ್ದಾರೆ ಎಂದು ಆರೋಪಿಸಿದರು.

- Advertisement -

ಘಟನೆಗೆ ಸಂಬಂಧಿಸಿದಂತೆ ಸಂಭಾಲ್ ಪೊಲೀಸರು ಆರೋಪಿ ತಾಲಿಬ್ ವಿರುದ್ಧ ಐಪಿಸಿ ಸೆಕ್ಷನ್ 153 ಎ, 295 ಎ, 353, 307 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.



Join Whatsapp