ಬಹ್ರೇನ್ ಪ್ರಧಾನಿ ಖಲೀಫಾ ಬಿನ್ ಸಲ್ಮಾನ್ ಅಲ್ ಖಲೀಫಾ ನಿಧನ

Prasthutha|

ದುಬೈ : ಅತಿ ದೀರ್ಘಾವಧಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಜಗತ್ತಿನ ಪ್ರಮುಖರಲ್ಲಿ ಒಬ್ಬರಾಗಿರುವ ಬಹ್ರೇನ್ ರಾಜಕುಮಾರ ಖಲೀಫಾ ಬಿನ್ ಸಲ್ಮಾನ್ ಅಲ್ ಖಲೀಫಾ ಬುಧವಾರ ನಿಧನರಾಗಿದ್ದಾರೆ. 84ರ ವಯಸ್ಸಿನಲ್ಲಿ ಅವರು ತಮ್ಮ ಆಪ್ತರು, ದೇಶವಾಸಿಗಳನ್ನು ಅಗಲಿ ಕೊನೆಯುಸಿರೆಳೆದಿದ್ದಾರೆ.

- Advertisement -

ಬಹ್ರೇನ್ ನ ಸರಕಾರಿ ಸುದ್ದಿ ವಾಹಿನಿ ಅವರ ಸಾವಿನ ಸುದ್ದಿಯನ್ನು ದೃಢಪಡಿಸಿದೆ. ಮೇಯೊ ಕ್ಲಿನಿಕ್ ನಲ್ಲಿ ಅವರು ಅನಾರೋಗ್ಯಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಕೋವಿಡ್ 19 ನಿಯಮಗಳ ಪ್ರಕಾರ, ನಿರ್ದಿಷ್ಟ ಸಂಖ್ಯೆಯ ಸಂಬಂಧಿಕರ ಸಮ್ಮುಖದಲ್ಲಿ ಮೃತರ ಅಂತ್ಯಸಂಸ್ಕಾರ ನಡೆಯಲಿದೆ. ಬಹ್ರೇನ್ ನಲ್ಲಿ ಒಂದು ವಾರ ಅಧಿಕೃತ ಶೋಕಾಚರಣೆ ಘೋಷಣೆಯಾಗಿದೆ. ಮೂರು ದಿನಗಳ ಕಾಲ ಸರಕಾರಿ ಸಚಿವಾಲಯಗಳು, ಇಲಾಖೆಗಳಿಗೆ ರಜೆ ಘೋಷಿಸಲಾಗಿದೆ.

Join Whatsapp