ನವದೆಹಲಿ: ಹೆಚ್ಚಿನ ಭಾರತೀಯರ ಫೇವರಿಟ್ ಹಾಗೂ ಮಧ್ಯಮ ವರ್ಗದವರ ಆಯ್ಕೆಯಾದ ಮಾರುತಿ ಸುಜುಕಿ ಇಂಡಿಯಾ ಮತ್ತು ಐಷಾರಾಮಿ ಕಾರು ತಯಾರಿಸುವ ಔಡಿ ಕಂಪೆನಿಗಳು ಜನವರಿ 1ರಿಂದ ವಾಹನಗಳ ಬೆಲೆ ಹೆಚ್ಚಿಸುವುದಾಗಿ ಹೇಳಿವೆ.
ಔಡಿ ಕಂಪನಿಯು ಭಾರತದಲ್ಲಿ 2024ರ ಜನವರಿ 1ರಿಂದ ತನ್ನೆಲ್ಲಾ ಕಾರುಗಳ ಬೆಲೆ ಶೇ 2ರವರೆಗೆ ಹೆಚ್ಚಿಸುವುದಾಗಿ ಹೇಳಿದೆ. ತಯಾರಿಕೆ ಮತ್ತು ಕಾರ್ಯಾಚರಣಾ ವೆಚ್ಚಗಳ ದುಬಾರಿ ಆಗಿರುವುದರಿಂದ ಈ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದೆ.
ಮಾರುತಿ ಸುಜುಕಿ ಇಂಡಿಯಾ ಕಂಪನಿಯು 2024ರ ಜನವರಿಯಿಂದ ತನ್ನ ವಾಹನಗಳ ಬೆಲೆಯನ್ನು ಹೆಚ್ಚಳ ಮಾಡುವುದಾಗಿ ತಿಳಿಸಿದ್ದು, ಬೆಲೆ ಏರಿಕೆಯ ಪ್ರಮಾಣವನ್ನು ತಿಳಿಸಿಲ್ಲ.
ಸರಕುಗಳ ದರ ಏರಿಕೆ ಮತ್ತು ಹಣದುಬ್ಬರದಿಂದ ವೆಚ್ಚದಲ್ಲಿ ಆಗಿರುವ ಹೆಚ್ಚದಿಂದಾಗಿ ಈ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಮಾರುತಿ ಸುಜುಕಿ ತಿಳಿಸಿದೆ. ಬೆಲೆ ಏರಿಕೆಯು ಮಾದರಿಯಿಂದ ಮಾದರಿಗೆ ವ್ಯತ್ಯಾಸ ಆಗಲಿದೆ ಎಂದೂ ಹೇಳಿದೆ.