ನವದೆಹಲಿ: ಬೆನ್ನಿಗೆ ಚೂರಿ ಹಾಕುವವರು ಇನ್ನೂ ಕಾಂಗ್ರೆಸ್ನಲ್ಲಿದ್ದಾರೆ ಎಂದು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. ಪಕ್ಷವನ್ನು ತೊರೆಯುವವರನ್ನು ದೇಶದ್ರೋಹಿಗಳು ಮತ್ತು ಅವಕಾಶವಾದಿಗಳು ಎಂದು ಕರೆದಿದ್ದಾರೆ.
ಲೋಕಸಭೆ ಚುನಾವಣೆಗೂ ಮುನ್ನ ಮಹೇಂದ್ರ ಜೀತ್ ಸಿಂಗ್ ಮಾಳವಿಯಾ, ಲಾಲ್ಚಂದ್ ಕಟಾರಿಯಾ, ರಾಜೇಂದ್ರ ಸಿಂಗ್ ಯಾದವ್ ಸೇರಿದಂತೆ ಹಲವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಪಕ್ಷಕ್ಕೆ ದ್ರೋಹ ಬಗೆದ ಇನ್ನೂ ಕೆಲವರು ಪಕ್ಷದಲ್ಲಿಯೇ ಮುಂದುವರೆದಿದ್ದು, ಈಗಲಾದರೂ ಪಕ್ಷಕ್ಕೆ ಆಸ್ತಿಯಾಗಲು ಪ್ರಯತ್ನಿಸಬೇಕು ಎಂದು ಹೆಸರು ಹೇಳದೆ ಹೇಳಿದರು. ಕಷ್ಟದ ಸಮಯದಲ್ಲಿ ಪಕ್ಷದೊಂದಿಗೆ ನಿಲ್ಲುವುದು ಮುಖ್ಯ, ಪಕ್ಷದ ಎಲ್ಲಾ ನಾಯಕರು, ಕಾರ್ಯಕರ್ತರು ಯಶಸ್ಸು ಪಡೆಯಬೇಕೆಂದು ನಾನು ಬಯಸುತ್ತೇನೆ, ಅವರು ಯಶಸ್ವಿಯಾದರೆ ಕಾಂಗ್ರೆಸ್ ಬಲಗೊಳ್ಳಲಿದೆ. ಪಕ್ಷಕ್ಕೆ, ಸಮಾಜಕ್ಕೆ ಕೀರ್ತಿ ತರುವ ಕೆಲಸ ಮಾಡಬೇಕು ಎಂದರು.