ಉಪ್ಪಿನಂಗಡಿ: ಕೆಂಪು ಕಲ್ಲು ಬಿದ್ದು ಮಗು ಮೃತ್ಯು

Prasthutha|

ಉಪ್ಪಿನಂಗಡಿ: ಮನೆಯಂಗಳದಲ್ಲಿ ಇರಿಸಲಾಗಿದ್ದ ಕೆಂಪು ಕಲ್ಲಿನ ಅಟ್ಟಿ ಮಗುಚಿ ಬಿದ್ದು ಮೂರುವರೆ ವರ್ಷ ಪ್ರಾಯದ ಗಂಡು ಮಗುವೊಂದು ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕು ತಣ್ಣೀರುಪಂತ  ಗ್ರಾಮದ ಬಾಯ್ತಾರು  ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ.

- Advertisement -

ಮುಹಮ್ಮದ್ ನೌಶೀರ್ ಮೃತ ಮಗು ಎಂದು ಗುರುತಿಸಲಾಗಿದೆ.

ಕಟ್ಟಡ ನಿರ್ಮಾಣಕ್ಕೆಂದು ಮನೆಯಂಗಳದಲ್ಲಿ ತಂದಿರಿಸಲಾಗಿದ್ದ ಕೆಂಪು ಕಲ್ಲಿನ ಅಟ್ಟಿಯ ಬಳಿ ಆಟವಾಡುತ್ತಿದ್ದ ನೌಶಿರ್ ಮೇಲೆ ಕಲ್ಲಿನ ಅಟ್ಟಿ ಮಗುಚಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

- Advertisement -



Join Whatsapp