ಹೊಸದಿಲ್ಲಿ: ಬಿಜೆಪಿ ತೊರೆದು ತೃಣಮೂಲ ಕಾಂಗ್ರೆಸ್ ಸೇರಿದ್ದ ಮಾಜಿ ಸಚಿವ ಬಾಬುಲ್ ಸುಪ್ರಿಯೋ ಮಂಗಳವಾರ ಬಿಜೆಪಿಗೆ ಅಧಿಕೃತವಾಗಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.
ಈ ಕುರಿತು ಸ್ವತಃ ಟ್ವಿಟ್ಟರ್ ನಲ್ಲಿ ಘೋಷಣೆ ಮಾಡಿದ ಸುಪ್ರಿಯೋ, ಬೆಳಿಗ್ಗೆ 11 ಗಂಟೆಗೆ ಅಧಿಕೃತವಾಗಿ ರಾಜೀನಾಮೆ ನೀಡಲು ಅವಕಾಶ ನೀಡಿದ್ದಕ್ಕಾಗಿ ಲೋಕಸಭಾ ಸ್ಪೀಕರ್ ಓಂ ಬಿರ್ಲ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಇನ್ನು ಮುಂದೆ ಬಿಜೆಪಿಯ ಸದಸ್ಯನಾಗಿರದ ಕಾರಣ ಬಿಜೆಪಿಯಿಂದಾಗಿ ಗೆದ್ದ ಲೋಕಸಭಾ ಸ್ಥಾನದ ಯಾವುದೇ ಪ್ರಯೋಜನಗಳ ಅಗತ್ಯವಿಲ್ಲ ಎಂದು ಸುಪ್ರಿಯೋ ಟ್ವೀಟ್ ಮಾಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅಧಿಕಾರಕ್ಕೆ ಬಂದ ನಂತರ ತೃಣಮೂಲ ಕಾಂಗ್ರೆಸ್ ಸೇರುವ ಐದನೇ ಬಿಜೆಪಿ ನಾಯಕರಾಗಿದ್ದಾರೆ ಬಾಬುಲ್ ಸುಪ್ರಿಯೋ. ಉಳಿದ ನಾಲ್ವರು ಬಿಜೆಪಿಯ ಶಾಸಕರು.