ಬಾಬರಿ ಮಸೀದಿ ಅಯೋಧ್ಯೆಯಲ್ಲೇ ಪುನರ್ ನಿರ್ಮಾಣಗೊಳ್ಳಲಿದೆ: ಇಮಾಮ್ಸ್ ಕೌನ್ಸಿಲ್ ಕರ್ನಾಟಕ

Prasthutha|

ಗುಲ್ಬರ್ಗಾ: ಬಾಬರಿ ಮಸೀದಿ ಅಯೋಧ್ಯೆಯಲ್ಲೇ ಪುನರ್ ನಿರ್ಮಾಣಗೊಳ್ಳಲಿದೆ ಎಂದು ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಕರ್ನಾಟಕ ರಾಜ್ಯಾಧ್ಯಕ್ಷ ಅತೀಕುರ್ರಹ್ಮಾನ್ ಅಶ್ರಫಿ ಹೇಳಿದ್ದಾರೆ.

- Advertisement -

ನಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಳ್ಳಿನ ಕಂತೆಗಳಿಂದ ನಿರ್ಮಾಣ ಮಾಡುವ ಮಂದಿರ ಮುಂದಿನ ದಿನಗಳಲ್ಲಿ ನೆಲಕ್ಕುರಳಲಿದೆ ಎಂದಿದ್ದಾರೆ.

ಬಾಬರಿ ಮಸೀದಿಯಲ್ಲಿ ಮತ್ತೆ ಆಝಾನ್ ಧ್ವನಿ ಮೊಳಗಲಿದೆ , ಅಲ್ಲಿಯೇ ಮುಸ್ಲಿಮರು ನಮಾಝ್ ನಿರ್ವಹಿಸಲಿದ್ದಾರೆ. ಬಾಬರಿ ಮಸೀದಿಯ ನಿರ್ಮಾಣದ ಮೂಲಕ ಭಾರತವು ತನ್ನ ಸಂವಿಧಾನದ ಘನತೆ ಮತ್ತು ಗೌರವವನ್ನು ಮರಳಿ ಪಡೆಯಲಿದೆ ಎಂದರು. ಮುಂದಿನ ದಿನಗಳಲ್ಲಿ ಈ ದೇಶದ ವ್ಯವಸ್ಥೆಗೆ ಸವಾಲು ಹಾಕಿ ಬಹಿರಂಗವಾಗಿ ಬಾಬರಿಯನ್ನು ಧ್ವಂಸಗೈದ ಅಪರಾಧಿಗಳಿಗೆ ಕಠಿಣ ಶಿಕ್ಷೆ ಆಗುತ್ತದೆ ಎಂದು ಹೇಳಿದರು.

- Advertisement -

ಮುಂಬರುವ ದಿನಗಳಲ್ಲಿ ಪ್ರಬಲ ಹೋರಾಟ ಮತ್ತು ಜನಾಂದೋಲನ ಮೂಲಕ ನಾವು ನ್ಯಾಯವನ್ನು ಪಡೆಯುತ್ತೇವೆ, ಇಲ್ಲಿನ ಸರ್ವಾಧಿಕಾರ ನೆಲಕಚ್ಚಿ , ಅನ್ಯಾಯ ಸೋಲಲಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ರಾಷ್ಟ್ರೀಯ ಕಾರ್ಯದರ್ಶಿ ಜಾಫರ್ ಸ್ವಾದಿಖ್ ಫೈಝಿ, ಗುಲ್ಬರ್ಗಾ ಜಿಲ್ಲಾಧ್ಯಕ್ಷರಾದ ಮೌಲಾನಾ ಇಬ್ರಾಹೀಂ ನಿಝಾಮಿ, ಹಾಫಿಝ್ ಮಸೂದ್, ಮೌಲಾನಾ ಅಬ್ದುಲ್ ರೌಫ್, ಮೌಲಾನಾ ತಾಹಾ ಜುನೈದ್ ಉಪಸ್ಥಿತರಿದ್ದರು.

Join Whatsapp