ಬಾಬಾ ಸಿದ್ದಿಕಿ ಹತ್ಯೆ ಪ್ರಕರಣ: ಪ್ರಮುಖ ಆರೋಪಿ, ಶೂಟರ್ ಬಂಧನ

Prasthutha|

ನವದೆಹಲಿ: ಎನ್​ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯನ್ನು ನೇಪಾಳದ ಗಡಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.

- Advertisement -

ಶಿವಕುಮಾರ್ ಸಿಕ್ಕಿಬಿದ್ದಾಗ ನೇಪಾಳಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದ. ಅಲ್ಲಿ ಎಸ್‌ಟಿಎಫ್ ಸಕಾಲದಲ್ಲಿ ಬಲೆ ಬೀಸಿ ಆತನನ್ನು ಹಿಡಿದಿದೆ. ಉತ್ತರ ಪ್ರದೇಶ ಪೊಲೀಸರು ಮತ್ತು ಮುಂಬೈ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಪ್ರಮುಖ ಆರೋಪಿ ಶೂಟರ್ ಶಿವಕುಮಾರ್ ಅಲಿಯಾಸ್ ಶಿವನನ್ನು ನೇಪಾಳದ ಬಹ್ರೈಚ್ ಬಳಿ ಬಂಧಿಸಿದ್ದಾರೆ.

ಯುಪಿ ಮತ್ತು ಮುಂಬೈನ ಎಸ್‌ಟಿಎಫ್ ತಂಡವು ನೇಪಾಳದಿಂದ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದಾಗ ಶಿವ ಮತ್ತು ಅವನ ನಾಲ್ವರು ಸಹಚರರನ್ನು ಹಿಡಿದಿದ್ದಾರೆ. ಆರೋಪಿಗಳ ವಿವರ: ಶಿವಕುಮಾರ್ ಗೌತಮ್ ಅಲಿಯಾಸ್ ಶಿವ, ಗಂದಾರಾ ಜಿಲ್ಲೆಯ ಬಹ್ರೈಚ್ ಗ್ರಾಮದ ನಿವಾಸಿ, ಅನುರಾಗ್ ಕಶ್ಯಪ್, ಬಹ್ರೈಚ್ ಜಿಲ್ಲೆಯ ಗಂದಾರಾ ಗ್ರಾಮದ ನಿವಾಸಿ, ಜ್ಞಾನ್ ಪ್ರಕಾಶ್ ತ್ರಿಪಾಠಿ, ಬಹ್ರೈಚ್ ಜಿಲ್ಲೆಯ ಗಂದಾರಾ ಗ್ರಾಮದ ನಿವಾಸಿ, ಆಕಾಶ್ ಶ್ರೀವಾಸ್ತವ, ಬಹ್ರೈಚ್ ಜಿಲ್ಲೆಯ ಗಂದಾರಾ ಗ್ರಾಮದ ನಿವಾಸಿ, ಅಖಿಲೇಂದ್ರ ಪ್ರತಾಪ್ ಸಿಂಗ್, ಬಹ್ರೈಚ್ ಜಿಲ್ಲೆಯ ಗಂದಾರಾ ಗ್ರಾಮದ ನಿವಾಸಿ.

- Advertisement -

ಪ್ರಕರಣದಲ್ಲಿ ಇದುವರೆಗೆ 23 ಮಂದಿಯನ್ನು ಬಂಧಿಸಲಾಗಿದೆ.



Join Whatsapp