ಕರ್ನಾಟಕದ ಅಝೀಂ ಪ್ರೇಮ್‌ಜಿ 2022-23ರಲ್ಲಿ ಮಾಡಿದ ದಾನ 1,774 ಕೋಟಿ ರೂ.

Prasthutha|

2020-21ರಲ್ಲಿ ₹9,713 ಕೋಟಿ ರೂ. ದಾನ ಮಾಡಿದ್ದರು!

- Advertisement -

ಬೆಂಗಳೂರು: ಎಡೆಲ್‌ಗಿವ್ ಹುರುನ್ ಇಂಡಿಯಾ ಫಿಲಾಂತ್ರಫಿ ಲಿಸ್ಟ್ 2023 ಬಿಡುಗಡೆ ಮಾಡಿದ ಪಟ್ಟಿಯ ಪ್ರಕಾರ ವಿಪ್ರೋದ ಅಝೀಂ ಪ್ರೇಮ್‌ಜಿ ಅತಿ ಹೆಚ್ಚು ದಾನ ಮಾಡುತ್ತಿರುವ ಉದ್ಯಮಿಯಾಗಿದ್ದಾರೆ. 2020-21ರಲ್ಲಿ ₹9,713 ಕೋಟಿ ರೂ. ಅವರು ದಾನ ಮಾಡಿದ್ದು ಆ ದಾಖಲೆಯ ಸನಿಹಕ್ಕೂ ಇದವರೆಗೆ ಯಾರೂ ತಲುಪಲಾಗಲಿಲ್ಲ.

ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ, ರೋಹಿಣಿ ನಿಲೇಕಣಿ, ಮೈಂಡ್‌ಟ್ರೀಯ ಸುಸ್ಮಿತಾ ಮತ್ತು ಸುಬ್ರೋತೊ ಬಾಗ್ಚಿ, ಬಯೋಕಾನ್‌ನ ಕಿರಣ್ ಮಜುಂದಾರ್ ಶಾ ಮತ್ತು ಝೆರೋಧಾ ಸಹ-ಸಂಸ್ಥಾಪಕರಾದ ನಿತಿನ್ ಮತ್ತು ನಿಖಿಲ್ ಕಾಮತ್ ಅವರು ಬೆಂಗಳೂರಿನ ಉನ್ನತ ಲೋಕೋಪಕಾರಿಗಳ ಪಟ್ಟಿಯಲ್ಲಿರುವ ಇತರ ಕರ್ನಾಟಕದ ಉದ್ಯಮಿಗಳು.

- Advertisement -

ಇನ್ಫೋಸಿಸ್‌ನ ಕ್ರಿಶ್ ಗೋಪಾಲಕೃಷ್ಣನ್, ಮಣಿಪಾಲ್ ಶಿಕ್ಷಣ ಮತ್ತು ವೈದ್ಯಕೀಯ ವಿಭಾಗದ ರಾಜನ್ ಪೈ, ಮೈಕ್ರೋ ಲ್ಯಾಬ್ಸ್‌ನ ದಿಲೀಪ್ ಮತ್ತು ಆನಂದ್ ಸುರಾನಾ, ಇನ್ಫೋಸಿಸ್ ಸಹ-ಸಂಸ್ಥಾಪಕರಾದ ಎಸ್‌ಡಿ ಶಿಬುಲಾಲ್ ಮತ್ತು ದಿನೇಶ್, ಹ್ಯಾಪಿಯೆಸ್ಟ್ ಮೈಂಡ್ಸ್ ಟೆಕ್ನಾಲಜೀಸ್ ಅಶೋಕ್ ಸೂಟ ಕೂಡ ಬೆಂಗಳೂರಿನ ದಾನಿಗಳ ಪಟ್ಟಿಯಲ್ಲಿದ್ದಾರೆ.

ಅಝೀಂ ಹಾಶಿಂ ಪ್ರೇಮ್‌ಜಿ ಮತ್ತು ಅವರ ಕುಟುಂಬವು 1,774 ಕೋಟಿ ರೂ. ದಾನ ನೀಡಿದ್ದು, ಬೆಂಗಳೂರು ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ನಂದನ್ ನಿಲೇಕಣಿ ರೂ 189 ಕೋಟಿ ರೂ., ರೋಹಿಣಿ ನಿಲೇಕಣಿ ರೂ 170 ಕೋಟಿ ರೂ., ಸುಸ್ಮಿತಾ ಮತ್ತು ಸುಬ್ರೋತೊ ಬಾಗ್ಚಿ ರೂ 110 ಕೋಟಿ ರೂ., ನಿತಿನ್ ಮತ್ತು ನಿಖಿಲ್ ಕಾಮತ್ 2023ರಲ್ಲಿ 110 ಕೋಟಿ ರೂ. ದೇಣಿಗೆ ನೀಡಿದ್ದಾರೆ.

ಮುಂಬೈ ಮತ್ತು ದೆಹಲಿ ನಂತರ 13 ಮಹಾ ದಾನಿಗಳೊಂದಿಗೆ ಬೆಂಗಳೂರು ದೇಶದಲ್ಲಿ 3 ನೇ ಸ್ಥಾನದಲ್ಲಿದೆ. ಹೆಚ್‌ಸಿಎಲ್ ಸಂಸ್ಥಾಪಕ ಮತ್ತು ಅಧ್ಯಕ್ಷ ಶಿವ ನಾಡಾರ್ ಅವರು 2,042 ಕೋಟಿ ರೂಪಾಯಿಗಳ ದೇಣಿಗೆಯೊಂದಿಗೆ ಸತತ ಎರಡನೇ ಬಾರಿಗೆ ದಾನಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಅಝೀಂ ಹಾಶಿಂ ಪ್ರೇಮ್‌ಜಿ ಭಾರತ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣಕ್ಕೆ ಪಾತ್ರರಾಗಿದ್ದಾರೆ. 2001 ರಲ್ಲಿ ಅವರು ಅಝೀಂ ಪ್ರೇಮ್‌ಜಿ ಫೌಂಡೇಶನ್ ಎಂಬ ಲಾಭೋದ್ದೇಶವಿಲ್ಲದ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ.

10 ನವೆಂಬರ್ 2020 ರಂದು ಹುರುನ್ ಇಂಡಿಯಾ ಮತ್ತು ಎಡೆಲ್‌ಗಿವ್ ಬಿಡುಗಡೆ ಮಾಡಿದ “ಭಾರತದ ಅತ್ಯಂತ ಉದಾರ ದಾನಿಗಳು” ಪಟ್ಟಿಯಲ್ಲಿ ಅಝೀಂ ಪ್ರೇಮ್‌ಜಿ ಅಗ್ರಸ್ಥಾನದಲ್ಲಿದ್ದರು. ಅವರು 2019–20 ರ ಹಣಕಾಸು ವರ್ಷದಲ್ಲಿ ಮತ್ತೂ 17 ಪಟ್ಟು ಹೆಚ್ಚು ದಾನ ನೀಡಿದ್ದಾರೆ. 2020-21ರಲ್ಲಿ ₹9,713 ಕೋಟಿ ರೂ.ದಾನ ನೀಡುವ ಮೂಲಕ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದರು. ಪ್ರಸಕ್ತ ವರ್ಷ ಸೇರಿದಂತೆ ಆನಂತರದ ಎರಡು ವರ್ಷಗಳಲ್ಲಿ ಹೆಚ್‌ಸಿಎಲ್ ಸಂಸ್ಥಾಪಕ ಮತ್ತು ಅಧ್ಯಕ್ಷ ಶಿವ ನಾಡಾರ್ ಅವರು ಅಗ್ರ ಸ್ಥಾನದಲ್ಲಿದ್ದಾರೆ.



Join Whatsapp