ಉತ್ತರ ಪ್ರದೇಶ ಎಸ್.ಟಿ.ಎಫ್ ಪಡೆಯಿಂದ ಮುಸ್ಲಿಮ್ ವ್ಯಕ್ತಿಯ ಎನ್ ಕೌಂಟರ್: ಕುಟುಂಬದ ಆರೋಪ

Prasthutha|

ಲಕ್ನೋ: ಉತ್ತರ ಪ್ರದೇಶದ ಸ್ಪೆಷಲ್ ಟಾಸ್ಕ್ ಫೋರ್ಸ್ (ಎಸ್.ಟಿ.ಎಫ್) ಪೊಲೀಸರು ಮುಸ್ಲಿಮ್ ಯುವಕನನ್ನು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿದ್ದಾರೆ.

- Advertisement -

ಅಝಂಘಡದಲ್ಲಿ ಕಮ್ರಾನ್ ಎಂಬ ವ್ಯಕ್ತಿಯನ್ನು ಎಸ್ ಟಿಎಫ್ ಪೊಲೀಸರು ಎನ್ ಕೌಂಟರ್ ನಲ್ಲಿ ಕೊಂದಿದ್ದಾರೆ ಎಂದು ಆತನ ಕುಟುಂಬ ಆರೋಪಿಸಿದೆ.

ಇದು ನಕಲಿ ಎನ್ ಕೌಂಟರ್ ಆಗಿದ್ದು, ಇದರ ವಿರುದ್ಧ ಸೂಕ್ತ ತನಿಖೆ ನಡೆಸಬೇಕೆಂದು ಕುಟುಂಬ ಒತ್ತಾಯಿಸಿದೆ.

- Advertisement -

ಅಕ್ಟೋಬರ್ 27 ರಂದು ಸಂಜೆ ಮಾಗ್ರಾನ್ ಎಂಬಲ್ಲಿ ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯಪಡೆಯ ಹಾರಿಸಿದ ಗುಂಡಿಗೆ ರಾಯಪುರ ಗ್ರಾಮದ ನಿವಾಸಿ ಕಮ್ರಾನ್ ಬಲಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಲಕ್ನೋದ ವ್ಯಾಪಾರಿ ಸಂಘದ ಮುಖ್ಯಸ್ಥನನ್ನು ಕೊಲ್ಲಲು ಯೋಜನೆ ರೂಪಿಸುತ್ತಿದ್ದ ವೇಳೆ ಎಸ್.ಟಿ.ಎಫ್ ನಡೆಸಿದ ಕಾರ್ಯಾಚರಣೆಯ ಸಂದರ್ಭದಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಶಾರ್ಪ್ ಶೂಟರ್ ಅಲಿಸ್ ಶೇರ್ ನೊಂದಿಗೆ ಕಮ್ರಾನ್ ಕೂಡ ಗುಂಡೇಟಿಗೆ ಬಲಿಯಾಗಿದ್ದಾರೆ ಎಂದು ಎಸ್.ಟಿ.ಎಫ್ ಎಸಿಪಿ ವಿಶಾಲ್ ವಿಕ್ರಮ್ ಸಿಂಗ್ ತಿಳಿಸಿದ್ದಾರೆ.

ಪೊಲೀಸರ ಈ ಹೇಳಿಕೆಯನ್ನು ಆಕ್ಷೇಪಿಸಿರುವ ಆತನ ಕುಟುಂಬ ಕಮ್ರಾನ್ ನನ್ನು ಸುಳ್ಳು ಕಥೆ ಹೆಣೆದು ಎನ್ ಕೌಂಟರ್ ಮೂಲಕ ಕೊಲ್ಲಲಾಗಿದೆ ಎಂದು ಆರೋಪಿಸಿದರಲ್ಲದೆ, ಈ ಸಂಬಂಧ ಎಸ್ಪಿ ಕಚೇರಿಗೆ ತೆರಳಿ ದೂರು ನೀಡಿದೆ. ಈ ವೇಳೆ ಕಮ್ರಾನ್ ಕುಟುಂಬದೊಂದಿಗೆ ಸಾಮಾಜಿಕ ಕಾರ್ಯಕರ್ತ ರಾಜೀವ್ ಯಾದವ್ ಅವರು ಉಪಸ್ಥಿತರಿದ್ದರು.

Join Whatsapp