SP ಮುಖಂಡ ಅಝಂ ಖಾನ್ ರ ಜೌಹರ್ ವಿಶ್ವವಿದ್ಯಾಲಯಕ್ಕೆ ಸೇರಿದ 12.5 ಎಕರೆ ಭೂಮಿ ಹಿಂದಿರುಗಿಸಲು ಆದೇಶಿಸಿದ ಉ.ಪ್ರ. ಸರಕಾರ

Prasthutha|

ಲಖನೌ : ಸಮಾಜವಾದಿ ಪಕ್ಷದ ಮುಖಂಡ ಅಝಂ ಖಾನ್ ಮುಖ್ಯಸ್ಥಿಕೆಯ ಮುಹಮ್ಮದ್ ಆಲಿ ಜೌಹರ್ ವಿಶ್ವವಿದ್ಯಾಲಯಕ್ಕೆ ಸೇರಿದ 12.5 ಎಕರೆ ಭೂಮಿಯನ್ನು ಸರಕಾರಕ್ಕೆ ಹಿಂತಿರುಗಿಸುವಂತೆ ಉತ್ತರ ಪ್ರದೇಶ ಸರಕಾರ ಆದೇಶಿಸಿದೆ. ರಾಮಪುರ ಜಿಲ್ಲಾಡಳಿತ ಈ ಸಂಬಂಧ ಆದೇಶವೊಂದನ್ನು ಜಾರಿ ಮಾಡಿದೆ.

- Advertisement -

ಅಝಂ ಖಾನ್ ಮತ್ತು ಅವರ ಕುಟುಂಬದಿಂದ ನಿರ್ವಹಿಸಲ್ಪಡುತ್ತಿರುವ ಜೌಹರ್ ವಿಶ್ವವಿದ್ಯಾಲಯಕ್ಕೆ ಯಾವ ಉದ್ದೇಶದಿಂದ ಭೂಮಿ ನೀಡಲಾಗಿತ್ತೋ, ಆ ಉದ್ದೇಶಗಳನ್ನು ಈಡೇರಿಸಿಲ್ಲವಾದುದರಿಂದ, ಭೂಮಿ ಹಿಂದಿರುಗಿಸಲು ಆದೇಶಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಯಾವುದೇ ವ್ಯಕ್ತಿ ಅಥವಾ ಸಂಘಟನೆ 12.5 ಎಕರೆಗಿಂತ ಹೆಚ್ಚು ಭೂಮಿ ಖರೀದಿಸುವಾಗ, ರಾಜ್ಯ ಸರಕಾರದ ಅನುಮತಿ ಪಡೆಯಬೇಕು. ಈ ನಿರ್ದಿಷ್ಟ ಭೂಮಿಯ ಮಾರಾಟದ ವೇಳೆ ರಾಜ್ಯ ಸರಕಾರ ಕೆಲವೊಂದು ಷರತ್ತುಗಳನ್ನು ವಿಧಿಸಿತ್ತು. ಆ ಷರತ್ತುಗಳಲ್ಲಿ, ಈ ಭೂಮಿಯನ್ನು ಚಾರಿಟೇಬಲ್ ಉದ್ದೇಶಕ್ಕಾಗಿ ಬಳಸಿಕೊಳ್ಳುವಂತೆ ನಿರ್ದೇಶಿಸಲಾಗಿತ್ತು. ಆದರೆ, ಅದಕ್ಕಾಗಿ ಅದನ್ನು ಬಳಸಿಕೊಂಡಿಲ್ಲ ಎಂಬುದು ನ್ಯಾಯಾಲಯ ಪತ್ತೆಹಚ್ಚಿದೆ. ಎಸ್ ಸಿ/ಎಸ್ ಟಿ ಸಮುದಾಯಗಳ ಭೂಮಿ ಖರೀದಿಸಬಾರದು ಎಂಬ ಷರತ್ತೂ ಇತ್ತು. ಆದರೆ. ಟ್ರಸ್ಟ್ ಉತ್ತರ ಪ್ರದೇಶ ಕಂದಾಯ ಕಾಯ್ದೆಯ ನೀತಿಗಳನ್ನು ಉಲ್ಲಂಘಿಸಿದೆ. ಈ ಭೂಮಿಯನ್ನು ಈಗ ಸರಕಾರದ ಹೆಸರಲ್ಲಿ ಕಂದಾಯ ದಾಖಲೆಗಳಲ್ಲಿ ನೋಂದಾಯಿಸಲಾಗುತ್ತದೆ ಎಂದು ಹೆಚ್ಚುವರಿ ಜಿಲ್ಲಾ ಸರಕಾರಿ ವಕೀಲ ಅಜಯ್ ತಿವಾರಿ ಹೇಳಿದ್ದಾರೆ.



Join Whatsapp