ಕಾಬೂಲ್: ಈಜಿಪ್ತ್ ಮೂಲದ ಸರ್ಜನ್ ಅಯ್ಮನ್ ಅಲ್ ಜವಾಹಿರಿಯವರು 71ರ ಪ್ರಾಯದಲ್ಲಿ ಕಾಬೂಲಿನಲ್ಲಿ ನಡೆದ ಡ್ರೋನ್ ದಾಳಿಯೊಂದರಲ್ಲಿ ವಾರಾಂತ್ಯದಲ್ಲಿ ಕೊಲ್ಲಲ್ಪಟ್ಟರು ಎಂದು ಅಮೆರಿಕದ ಅಧಿಕಾರಿಗಳು ವರದಿ ಮಾಡಿದ್ದಾರೆ. ಒಸಾಮಾ ಬಿನ್ ಲಾಡೆನ್ ಬಳಿಕ ಅಲ್ ಖೈದಾ ನಾಯಕತ್ವ ವಹಿಸಿದವರು ಜವಾಹಿರಿ.
2011ರಲ್ಲಿ ಬಿನ್ ಲಾಡೆನ್ ಅಮೆರಿಕದ ದಾಳಿಗೆ ಬಲಿಯಾದ ಬಳಿಕ ದಾಳಿಗೆ ಪ್ರತಿದಾಳಿ ತಜ್ಞರು ಜವಾಹಿರಿಯವರನ್ನು ಆ ಸ್ಥಾನದಲ್ಲಿ ಕೂರಿಸಿದರು. ದೊಡ್ಡ ಮುಂಡಾಸು, ಕಂದು ಗಡ್ಡ, ಹಣೆಯಲ್ಲಿ ನಮಾಜು ಗುರುತಿನ ಜವಾಹಿರಿಯವರು ಬಿನ್ ಲಾಡೆನ್ ಆಕರ್ಷಣೆ ಪಡೆಯಲಿಲ್ಲ. ಆದರೆ ಅಲ್ ಖೈದಾದ ಮಿದುಳು ಎಂದು ಪರಿಗಣಿಸಲ್ಪಟ್ಟವರು.
ಉಗ್ರ ಯೋಜನೆ ಎಂಬ ಸಂಶೋಧನೆಯಲ್ಲಿ ತೊಡಗಿರುವ ತವ್ಫಿಕ್ ಹಮೀದ್ ಅವರು 2011ರ ಮೇನಲ್ಲಿ ಜವಾಹಿರಿಯವರು ಭಾರೀ ಪ್ರಭಾವಿ ಮತ್ತು 100% ಕಾರ್ಯ ತತ್ಪರರು ಎಂದು ಬರೆದಿದ್ದಾರೆ.
ಅವರ ನಾಯಕತ್ವದಲ್ಲಿ ಅಲ್ ಖೈದಾ ಜಾಗತಿಕ ಪ್ರಭಾವ ಕುಂದಿತು. ಇಸ್ಲಾಮಿಕ್ ಸ್ಟೇಟ್ ಗುಂಪು ಬೆಳೆಯಿತು. ಆದರೆ ಅಲ್ ಖೈದಾ ಜಾಗತಿಕವಾಗಿ ತನ್ನ ಸ್ಥಾನವನ್ನು ಭದ್ರಪಡಿಸಿತ್ತು ಎಂದೇ ಹೇಳಲಾಗುತ್ತಿತ್ತು.
ಅಮೆರಿಕ ಸರ್ಕಾರ ಜವಾಹಿರಿ ತಲೆಗೆ 2.5 ಲಕ್ಷ ಡಾಲರ್ ಬಹುಮಾನ ಘೋಷಣೆ ಮಾಡಿತ್ತು.
ಅಮೆರಿಕವು ಲಾಡೆನ್ ಮತ್ತು ಜವಾಹಿರಿ ವಿರುದ್ಧ ನಾನಾ ಕಡೆ ಕಾರ್ಯಾಚರಣೆಗಳನ್ನು ಕೈಗೊಂಡಿತು. ಸೆಪ್ಟೆಂಬರ್ 11 ದಾಳಿ ಎಂದೇ ಖ್ಯಾತವಾದ ಯುಎಸ್ ನ ಅವಳಿ ವಾಣಿಜ್ಯ ಕಟ್ಟಡ ಉರುಳಿದ ಮೇಲೆ ಅಮೆರಿಕದ ಡ್ರೋನ್ ದಾಳಿಗಳು ಅತಿಯಾದವು. ಒಮ್ಮೆ ಜವಾಹಿರಿ ಸತ್ತರು ಎಂದು ಎರಡು ದಶಕ ಹಿಂದೆಯೇ ಸುದ್ದಿಯಾಗಿತ್ತು.
ಪಾಕಿಸ್ತಾನದ ಅಬೋಟಾಬಾದಿನ ಒಂದು ನೆಲೆಯಲ್ಲಿ ಅಮೆರಿಕದ ನೇವಿ ಸೀಲ್ ತಂಡವು 2011ರ ಮೇ ತಿಂಗಳಲ್ಲಿ ಒಸಾಮಾ ಬಿನ್ ಲಾಡೆನ್ ರನ್ನು ಕೊಂದಿತು. ಕೊಂದ 28 ನಿಮಿಷಕ್ಕೆ ಒಂದು ವೀಡಿಯೋ ಹಾಕಿದ ಜವಾಹಿರಿಯವರು ಸತ್ತ ಲಾಡೆನ್ ರು ಅಮೆರಿಕವನ್ನು ಕಾಡಲಿದ್ದಾರೆ ಎಂದು ಅದರಲ್ಲಿ ಎಚ್ಚರಿಸಿದ್ದರು.