ಮಂಗಳೂರು: ಹಿಂದಿನ ದರದಲ್ಲಿ ಆಟೋ ಗ್ಯಾಸ್ ವಿತರಿಸಿ ಸುಲಿಗೆ | ವಿತರಕರಿಗೆ SDTU ಸದಸ್ಯರಿಂದ ತರಾಟೆ

Prasthutha|

ಮಂಗಳೂರು: ಆಟೋ ಗ್ಯಾಸ್ ದರ ಪರಿಷ್ಕರಣೆಯಾದರೂ ಹಿಂದಿನ ದರದಲ್ಲಿ ಗ್ಯಾಸ್ ವಿತರಿಸಿ ಸುಲಿಗೆ ನಡೆಸುತ್ತಿರುವ ವಿತರಕರನ್ನು SDTU ಆಟೋ ಚಾಲಕ ಯೂನಿಯನ್ ಸದಸ್ಯರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

- Advertisement -

 ಆಟೋ LPG ಗ್ಯಾಸ್ ಲೀಟರ್ ಗೆ 65.78 ರೂಪಾಯಿಯಿಂದ 54.26 ರೂಪಾಯಿಗೆ ದರ ಪರಿಷ್ಕರಣೆಗೊಂಡಿದ್ದು, ಏ.18 ರಂದು ಸಂಜೆ ಚಾಲಕರು ರಿಕ್ಷಾಗಳಿಗೆ ಗ್ಯಾಸ್ ತುಂಬಿಸುವ ವೇಳೆ ಮಂಗಳೂರು ಬಲ್ಮಠದಲ್ಲಿರುವ ಪಂಪ್ ನಲ್ಲಿ 54.26 ರೂಪಾಯಿಯಾದರೆ ಪಡೀಲ್, ಬಂಟ್ವಾಳದ ತಲಪಾಡಿ ಮತ್ತು ಬಿಸಿರೋಡ್ ನಲ್ಲಿರುವ ಪಂಪ್ ನಲ್ಲಿ 65.78 ರೂಪಾಯಿಯಂತೆ ಹಿಂದಿನ ದರದಂತೆ ಸುಲಿಗೆ ನಡೆಸುತ್ತಿರುವ ಗ್ಯಾಸ್ ವಿತರಕರ ವಿರುದ್ಧ SDTU ಆಟೋ ಚಾಲಕರ ಯೂನಿಯನ್ ಸದಸ್ಯರು ಪಡೀಲ್, ಬಂಟ್ವಾಳದ ತಲಪಾಡಿ ಮತ್ತು ಬಿಸಿರೋಡ್ ನಲ್ಲಿರುವ ಗ್ಯಾಸ್ ವಿತರಕರನ್ನು ತರಾಟೆಗೈದು ಪ್ರತಿಭಟನೆ ನಡೆಸಿದಾಗ ರಿಕ್ಷಾ ಚಾಲಕರು ಮತ್ತು ಗ್ಯಾಸ್ ವಿತರಕರ ನಡುವೆ ಮಾತಿನ ಚಕಮುಕಿ ನಡೆದಿದೆ. ಈ ಸಂದರ್ಭದಲ್ಲಿ ರಿಕ್ಷಾ ಚಾಲಕರು ಪೋಲಿಸ್ ದೂರು ದಾಖಲು ಮಾಡಲು ಮುಂದಾದಾಗ ವಿತರಕರು ಪರಿಷ್ಕೃತ ದರದಂತೆ ದರ ಪರಿಷ್ಕೃತಗೊಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ SDTU ದಕ ಜಿಲ್ಲಾ ಉಪಾಧ್ಯಕ್ಷರಾದ ಸಿದ್ದೀಕ್ ಕಣ್ಣಂಗಾರ್, ಬೆಲೆ ಏರಿಕೆಯಿಂದ ಆರ್ಥಿಕ ಸಂಕಷ್ಟವನ್ನೆದುರಿಸಿ ಈ ಸುಡು ಬಿಸಿಲಿನಲ್ಲಿ ಶ್ರಮ ಪಟ್ಟು ದುಡಿಯುವ ಆಟೋ ಚಾಲಕರಿಂದ ಆಟೋ LPG ವಿತರಕರು ಸುಲಿಗೆ ನಡೆಸುತ್ತಿರುವುದು ಖಂಡನೀಯ. ದರ ಪರಿಷ್ಕೃತಗೊಳ್ಳುವಾಗ ಅಧಿಕೃತರು ಮಾಧ್ಯಮದ ಮುಖಾಂತರ ಪ್ರಕಟಣೆ ಹೊರಡಿಸಬೇಕು ಮಾತ್ರವಲ್ಲ ದರ ಪರಿಷ್ಕೃತಗೊಂಡ ಸಂದರ್ಭದಲ್ಲಿ ಸುಲಿಗೆ ನಡೆಸುವ ಗ್ಯಾಸ್ ವಿತರಕರನ್ನು ಕಾನೂನಿನಡಿಯಲ್ಲಿ ತನಿಖೆಗೊಳಪಡಿಸಬೇಕು ಜಿಲ್ಲೆಯಲ್ಲಿ ವಿವಿಧ ಕಡೆ ಗ್ಯಾಸ್ ವಿತರಕರು ಪರಿಷ್ಕೃತ ದರ ಗಣನೆಗೆ ತೆಗೆಯದೆ ಈಗಲೂ ಸುಲಿಗೆ ನಡೆಸುತ್ತಿರುವ ಬಗ್ಗೆ ಅಧಿಕೃತರು ಗಮನ ಹರಿಸಲಿ ಎಂದು ಒತ್ತಾಯಿಸಿದ್ದಾರೆ.

- Advertisement -

ಈ ಸಂದರ್ಭದಲ್ಲಿ SDTU ಬಂಟ್ವಾಳ ತಾಲೂಕು ಅಧ್ಯಕ್ಷ ಮುಸ್ತಕ್ ತಲಪಾಡಿ, ಆಟೋ ಚಾಲಕರ ಯೂನಿಯನ್ ಬಂಟ್ವಾಳ ತಾಲೂಕು ಅಧ್ಯಕ್ಷ ಸಂಶುದ್ದಿನ್ ಪಲ್ಲಮಜಲ್, ಫಾರೂಕು ತುಂಬೆ, ಸಿದ್ದೀಕ್, ಅಶ್ರಫ್ ಮತ್ತಿತರ ಆಟೋ ಚಾಲಕರು ಉಪಸ್ಥಿತರಿದ್ದರು.



Join Whatsapp