ವಿದ್ಯುತ್ ತಂತಿ ತಗುಲಿ ಆಟೋ ಚಾಲಕರ ಮೃತ್ಯು; ಮೆಸ್ಕಾಂ ನಿರ್ಲಕ್ಷ್ಯದ ಬಗ್ಗೆ ತನಿಖೆ ನಡೆಯಲಿ: SDTU, SDPI ಆಗ್ರಹ

Prasthutha|

ಮಂಗಳೂರು: ನಗರದ ರೋಜಾರಿಯೋ ಶಾಲೆ ಬಳಿ ರಿಕ್ಷಾ ತೊಳೆಯುವ ವೇಳೆ ತುಂಡಾಗಿ ಬಿದ್ದ ವಿದ್ಯುತ್ ತಂತಿ ತಗುಲಿ ಆಟೋ ಚಾಲಕರಿಬ್ಬರು ದಾರುಣವಾಗಿ ಮೃತಪಟಿದ್ದಾರೆ. ಶಿಥಿಲಗೊಂಡ ತಂತಿಗಳನ್ನು ಮಳೆಗಾಲಕ್ಕೆ ಮುಂಚಿತವಾಗಿ ದುರಸ್ಥಿಗೊಳಿಸದ ಕಾರಣವೇ ಈ ಅವಘಡ ಸಂಭವಿಸಿದೆ ಎಂದು ಸೋಶಿಯಲ್ ಡೆಮಾಕ್ರೆಟಿಕ್ ಆಟೋ ಚಾಲಕರ ಯೂನಿಯನ್ ಮಂಗಳೂರು ನಗರ ಸಮಿತಿ ಅಧ್ಯಕ್ಷ ಇಲ್ಯಾಸ್ ಬೆಂಗರೆ ಆರೋಪಿಸಿದ್ದಾರೆ.

- Advertisement -

ಸ್ವಾಭಿಮಾನದಿಂದ ದುಡಿದು ಕುಟುಂಬಕ್ಕೆ ಆಶ್ರಯವಾಗಿದ್ದ ಆಟೋ ಚಾಲಕರ ಈ ದುರ್ಮರಣ ಕುಟುಂಬದ ಆಧಾರವೇ ಕಳಚಿದಂತಾಗಿದೆ. ಈ ಘಟನೆಯನ್ನು ತನಿಖೆ ನಡೆಸಿ ಮೃತರ ಕುಟುಂಬಕ್ಕೆ ತಲಾ ಹತ್ತು ಲಕ್ಷ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ರಿಕ್ಷಾ ಮತ್ತು ದ್ವಿಚಕ್ರ ವಾಹನ ಸವಾರರು ಮಳೆಗಾಲದ ಈ ಸಂದರ್ಭದಲ್ಲಿ ಅತ್ಯಂತ ಜಾಗರುಕರಾಗಿ ವಾಹನ ಚಲಾವಣೆ ಮಾಡಬೇಕು ಎಂದು ವಿನಂತಿಸಿದ್ದಾರೆ. ಮೃತರ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿ ಸೃಷ್ಟಿಕರ್ತನು ನೀಡಲಿ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.

- Advertisement -

ಅಮಾಯಕ ಚಾಲಕರ ದುರ್ಮರಣಕ್ಕೆ ಹೊಣೆ : ಎಸ್.ಡಿ.ಪಿ.ಐ ಆರೋಪ

ಅಮಾಯಕ ಆಟೋ ಚಾಲಕರಿಬ್ಬರ ದುರ್ಮರಣಕ್ಕೆ ಸರಕಾರವೇ ಹೊಣೆ ಎಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಅಕ್ಬರ್ ರಾಜ್ಹಾ ಆರೋಪಿಸಿದ್ದಾರೆ. ಸ್ಮಾರ್ಟ್ ಸಿಟಿ ಮಂಗಳೂರಿನ ತುಕ್ಕು ಹಿಡಿದ ಹೈ ವೋಲ್ಟೇಜ್ ತಂತಿ ಮುರಿದು ಬೀಳುವಷ್ಟು ಹೀನಾಯ ಸ್ಥಿತಿಗೆ ತಲುಪಿದರು ಅದನ್ನು ಸರಿಪಡಿಸದ ಮೆಸ್ಕಾಂ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಒಂದೆರಡು ತಿಂಗಳು ವಿದ್ಯುತ್ ಬಿಲ್  ಕಟ್ಟದಿದ್ದರೆ ಮನೆ ಮನೆಗೆ ಬಂದು ಸತಾಯಿಸಿ ಫೀಸ್ ತೆಗೆದು ಡಿಸ್ಕನೆಕ್ಟ್ ಮಾಡುವ ಕಾಯಕ ರೂಡಿಯಾಗಿ ಬೆಳಸಿರುವ ಈ ಮೆಸ್ಕಾಂ ಅಧಿಕಾರಿಗಳು ತುಕ್ಕು ಹಿಡಿದ ತಂತಿ,ಕಂಬ,ರೂಟ್ ಯಾವುದನ್ನು ತಪಾಸಣೆ ಮಾಡುವ ಜವಾಬ್ಧಾರಿಯನ್ನು ನಿಭಾಯಿಸದ ಕಾರಣ  ಈ ದುರ್ಘಟನೆ ಉಂಟಾಗಿದೆಯೆಂದು ಆರೋಪಿಸಿದ್ದಾರೆ.

ಮರಣ ಹೊಂದಿದ ಚಾಲಕರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಅವರು ಸರಕಾರ ಹಾಗೂ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

Join Whatsapp