ಬಂಟ್ವಾಳ: ಮನೆಯ ಮಹಡಿಯಿಂದ ಬಿದ್ದು ಆಟೋ ಚಾಲಕ ಮೃತ್ಯು

Prasthutha|

ಬಂಟ್ವಾಳ: ನಿರ್ಮಾಣ ಹಂತದ ಹೊಸ ಮನೆಯ ಮಹಡಿಗೆ ತೆರಳಿದ್ದ ಆಟೋ ರಿಕ್ಷಾ ಚಾಲಕ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಮಂಗಳವಾರ ಮಾಣಿ ಸಮೀಪದ ಗಡಿಯಾರದಲ್ಲಿ ನಡೆದಿದೆ.

- Advertisement -

ಇಲ್ಲಿನ ಬಾನಗುಂಡಿ ನಿವಾಸಿ ಕಾಂತಪ್ಪ ಮೂಲ್ಯ (48) ಮೃತಪಟ್ಟವರು. ಅವರು ಹೊಸ ಮನೆ ನಿರ್ಮಾಣ ಮಾಡುತ್ತಿದ್ದು, ಹೀಗಾಗಿ ಕಾಮಗಾರಿ ಪರಿಶೀಲನೆಗಾಗಿ ಮಹಡಿಯ ಮೇಲೆ ತೆರಳಿದ್ದರು. ಈ ವೇಳೆ ಕಾಲು ಜಾರಿ ಬಿದ್ದ ಅವರನ್ನು ತತ್‌ಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಅವರು ಅದಾಗಲೇ ಮೃತಪಟ್ಟಿದ್ದರು ಎನ್ನಲಾಗಿದೆ.

ಮೃತರ ಗೌರವಾರ್ಥ ಗಡಿಯಾರ ಪಾರ್ಕಿನ ಆಟೋ ಚಾಲಕರು ಬಾಡಿಗೆ ನಡೆಸದೆ ಸಂತಾಪ ಸೂಚಿಸಿದರು. ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

Join Whatsapp