ಔರಂಗಬಾದ್, ಉಸ್ಮಾನಾಬಾದ್ ನಗರಗಳ ಹೆಸರು ಬದಲಾವಣೆ

Prasthutha|

ಮುಂಬೈ: ಮಹಾರಾಷ್ಟ್ರದ ಮರಾಠವಾಡ ಪ್ರದೇಶದಲ್ಲಿರುವ ಔರಂಗಬಾದ್ ಮತ್ತು ಉಸ್ಮಾನಾಬಾದ್ ನಗರಗಳ ಹೆಸರುಗಳನ್ನು ವಿವಾದಾತ್ಮಕವಾಗಿ ಬದಲಾಯಿಸಿ ಕೇಂದ್ರ ಸರಕಾರವು ಆದೇಶ ಹೊರಟಿಸಿದೆ.

- Advertisement -


ಕೇಂದ್ರ ಸರಕಾರದ ಸುತ್ತೋಲೆಯಂತೆ ಇನ್ನು ಮುಂದೆ ಔರಂಗಬಾದ್ ಹೆಸರು ಸಂಭಾಜಿ ನಗರ್ ಎಂದು ಬದಲಾಗಿದೆ. ಹಾಗೆಯೇ ಉಸ್ಮಾನಾಬಾದ್ ಹೆಸರನ್ನು ದಾರಾಶಿವ್ ಎಂದು ಬದಲಾಯಿಸಲಾಗಿದೆ.
2022ರ ಅಕ್ಟೋಬರ್ 20ರಂದು ಮಹಾರಾಷ್ಟ್ರ ಸರಕಾರವು ಸಂಪುಟ ತೀರ್ಮಾನದಂತೆ ಕೇಂದ್ರಕ್ಕೆ ಬರೆದ ಪತ್ರದಂತೆ ಈ ಹೆಸರು ಬದಲಾವಣೆ ಮಾಡಲಾಗಿದೆ ಎಂದು ಹೇಳಲಾಗಿದೆ.


ಉಸ್ಮಾನಾಬಾದ್ ನಗರದಲ್ಲಿ ನಾನಾ ಗುಹೆಗಳು ಇರುವುದರಿಂದ ಅದನ್ನು ದಾರಾಶಿವ್ ಎಂದು ಹೆಸರಿಸಲಾಗಿದೆ. ಸಂಭಾಜಿ ನಗರ್ ಹೆಸರು ಛತ್ರಪತಿ ಶಿವಾಜಿ ಮಹಾರಾಜ್’ರ ಮಗ ಛತ್ರಪತಿ ಸಂಭಾಜಿ ಮಹಾರಾಜ್ ಎನ್ನುವುದರ ಮೇಲೆ ಇಡಲಾಗಿದೆ. ಸಂಭಾಜಿ ಈ ಪ್ರದೇಶವನ್ನು 1681- 1689ರ ನಡುವೆ ಆಳಿದನು. 1689ರ ಮಾರ್ಚ್ ನಲ್ಲಿ 31ರ ಪ್ರಾಯದಲ್ಲಿ ಸಂಭಾಜಿ ಮೃತಪಟ್ಟಿದ್ದರು.
ಹೆಸರಿನ ಸುತ್ತೋಲೆ ಹೊರಡುತ್ತಲೇ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಪ್ರಧಾನಿ ಮೋದಿ ಮತ್ತು ಗೃಹ ಮಂತ್ರಿ ಅಮಿತ್ ಶಾ ಅವರನ್ನು ಅಭಿನಂದಿಸಿದ್ದಾರೆ.



Join Whatsapp