ಹೊಸದಿಲ್ಲಿ: ಲಖಿಂಪುರ್ ಹತ್ಯಾಕಾಂಡ ವಿಚಾರದಲ್ಲಿ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಆರ್ಯನ್ ಖಾನ್ ಪ್ರಕರಣ ಯಶಸ್ವಿಯಾಗಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿದ ಅವರು, ಆಶಿಶ್ ಮಿಶ್ರಾ ಮತ್ತು ಲಖಿಂಪುರ್ ಖೇರಿ ಪ್ರಕರಣದಿಂದ ಗಮನವನ್ನು ಯಶಸ್ವಿಯಾಗಿ ಬೇರೆಡೆಗೆ ತಿರುಗಿಸಲಾಗಿದೆ ಎಂದಿದ್ದಾರೆ.
ಎನ್ಸಿಬಿಯ ತನಿಖೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಅಲ್ಲಿ ಡ್ರಗ್ಸ್ ಸೇವಿಸಿದ್ದಕ್ಕೆ, ಸಾಗಿಸಿದ್ದಕ್ಕೆ ಪುರಾವೆಗಳಿಲ್ಲ. ತಾನು ನಿರಪರಾಧಿಯಾದರೂ ಅದು ಸಾಬೀತಾಗುವವರೆಗೂ ತಪ್ಪಿತಸ್ಥ ನೆಂಬ ಪ್ರಕರಣ ಇದಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕೇಂದ್ರ ಸಚಿವ ಅಜಯ್ ಮಿಶ್ರಾರವರ ಮಗ ಆಶಿಶ್ ಮಿಶ್ರಾ ಕಾರು ಹರಿಸಿ ನಾಲ್ವರು ರೈತರು ಸೇರಿದಂತೆ 8 ಜನರ ಹತ್ಯೆಗೆ ಮಾಡಿದ್ದ.
ರೈತರ ಹತ್ಯಾಕಾಂಡ ನಡೆದ ಕೆಲವೇ ಗಂಟೆಗಳಲ್ಲಿ ಖ್ಯಾತ ಬಾಲಿವುಡ್ ನಟ ಶಾರುಖ್ ಖಾನ್ರವರ ಮಗ ಆರ್ಯನ್ ಖಾನ್ನನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಗೋವಾ ವ್ಯಾಪ್ತಿಯ ಕ್ರೂಸ್ ಹಡಗಿನಿಂದ ಬಂಧಿಸಿತ್ತು.