ಜೆಸಿಬಿ ಬಳಸಿ ATM ಕಳ್ಳತನಕ್ಕೆ ಯತ್ನ: ದುಷ್ಕರ್ಮಿಗಳು ಪರಾರಿ

Prasthutha|

ಶಿವಮೊಗ್ಗ: ಜೆಸಿಬಿ ಬಳಸಿ ಕಳ್ಳರು ಎಟಿಎಂ ಕಳ್ಳತನಕ್ಕೆ ಯತ್ನಿಸಿರುವ ಘಟನೆ ಶಿವಮೊಗ್ಗದ ವಿನೋಬನಗರ ಬಡಾವಣೆಯಲ್ಲಿ ನಡೆದಿದೆ.

- Advertisement -


ರಾತ್ರೋರಾತ್ರಿ ಕಳ್ಳರು ಆಕ್ಸಿಕ್ ಬ್ಯಾಂಕ್ ನ ಎಟಿಎಂ ಬಳಿಗೆ ಜೆಸಿಬಿ ತಂದಿದ್ದಾರೆ. ಜೆಸಿಬಿ ಮೂಲಕ ಎಟಿಎಂ ನಲ್ಲಿರುವ ಹಣ ಕಳ್ಳತನಕ್ಕೆ ಮುಂದಾಗಿದ್ದಾರೆ.


ರಾತ್ರಿ ಗಸ್ತು ಪೊಲೀಸರು ಬರುತ್ತಿದ್ದಂತೆ ಸ್ಥಳದಲ್ಲೇ ಜೆಸಿಬಿ ಬಿಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಜೆಸಿಬಿಯನ್ನು ವಶಕ್ಕೆ ಪಡೆದಿದ್ದಾರೆ.
ಕುತೂಹಲಕಾರಿ ಘಟನೆ ಎಂದರೆ, ಎಟಿಎಂ ಕಳ್ಳತನಕ್ಕೆ ತಂದಿದ್ದ ಜೆಸಿಬಿಯನ್ನೂ ಸಹ ಕದ್ದು ತಂದಿರುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.

Join Whatsapp