ಮುಸ್ಲಿಂ ಮಾರಾಟಗಾರನ ಕೊಲೆಯತ್ನ : ತಡೆದ ಬೆಂಗಳೂರು ಪೊಲೀಸ್

Prasthutha|

ಬೆಂಗಳೂರು: ಲಾಲ್‌ಬಾಗ್‌ನಲ್ಲಿ ಪಾಪ್‌ಕಾರ್ನ್ ತಯಾರಿಸುವ ಮೊದಲು ಎಣ್ಣೆಗೆ ಉಗುಳಿದ್ದಾರೆ ಎಂದು ಆರೋಪಿಸಿ ನವಾಜ್ ಪಾಷಾ ಎಂಬ ಮುಸ್ಲಿಂ ವ್ಯಾಪಾರಿಯ ಮೇಲೆ ಗುಂಪೊಂದು ಹಲ್ಲೆ ನಡೆಸಿ‌ ಕೊಲ್ಲಲು ಯತ್ನಿಸಿತ್ತು. ಇದನ್ನು ಅಲ್ಲೇ ಇದ್ದ ಪೊಲೀಸ್ ಅಧಿಕಾರಿಯೊಬ್ಬರು ತಡೆದು ನವಾಝ್ ಅವರನ್ನು ಸಾಂಧರ್ಭಿಕವಾಗಿ ಬಂಧನ ಮಾಡಿದ್ದಾರೆ.

- Advertisement -

ನವಾಜ್ ಪಾಷಾ ಸುಮಾರು ಹತ್ತು ವರ್ಷಗಳಿಂದ ಲಾಲ್‌ಬಾಗ್‌ನಲ್ಲಿ ಪಾಪ್‌ಕಾರ್ನ್ ಮಾರಾಟ ಮಾಡುತ್ತಿದ್ದು, ಜೂನ್ 11, ಶನಿವಾರದಂದು ಅವರು ಕೆಲಸಕ್ಕೆ ತಯಾರಾಗುತ್ತಿದ್ದಾಗ ಹಾದುಹೋಗುವ ಜನರ ಗುಂಪು ಎಣ್ಣೆ ಪ್ಯಾಕೆಟ್ ಅನ್ನು ತೆರೆಯಲು ಕಚ್ಚುತ್ತಿರುವುದನ್ನು ನೋಡಿ, ಆತ ಎಣ್ಣೆಗೆ ಉಗುಳಿದ್ದಾನೆ ಎಂದು ಆರೋಪಿಸಿ ಗಲಾಟೆ ಸೃಷ್ಟಿಸಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಅದೇ ಸಮಯದಲ್ಲಿ ಒಬ್ಬ ಪೊಲೀಸ್ ಇನ್ಸ್‌ಪೆಕ್ಟರ್ ಪಾರ್ಕ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದು, ಆ ಗುಂಪು ನವಾಜ್‌ನನ್ನು ಕೊಲ್ಲಲು ಪ್ರಯತ್ನಿಸುತ್ತಿರುವುದನ್ನು ಕಂಡಿದ್ದಾರೆ. ಪೊಲೀಸರನ್ನು ನೋಡಿದ ಜನಸಮೂಹವು ನವಾಜ್ ಅವರನ್ನು ಬಂಧಿಸಬೇಕೆಂದು ಬಯಸಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆದರೆ, ಈ ಬಗ್ಗೆ ಅಧಿಕೃತ ದೂರನ್ನು ಅವರ್ಯಾರೂ ದಾಖಲಿಸಲು ಮುಂದಾಗಲಿಲ್ಲ ಎಂದು ತಿಳಿದು‌ ಬಂದಿದೆ.

- Advertisement -

ನಂತರ ನವಾಜ್ ಬಳಿಯಿದ್ದ ಎಣ್ಣೆ ಬಾಟಲಿಯನ್ನು ವಶಪಡಿಸಿಕೊಂಡ ಇನ್ಸ್‌ಪೆಕ್ಟರ್, ಯಾವುದೇ ಅಹಿತಕರ ಘಟನೆ ನಡೆಯದಂತೆ ನವಾಜ್‌ನನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ



Join Whatsapp