ರಾಂಚಿ: ಕೋಮುಗಲಭೆ ಸೃಷ್ಟಿಸುವ ನೆಪದಲ್ಲಿ ಮೂವರು ದುಷ್ಕರ್ಮಿಗಳು, ಮಸೀದಿಗೆ ನುಗ್ಗಿ ಮೂತ್ರ ವಿಸರ್ಜನೆ ಮಾಡಿದ ಘಟನೆ ಜಾರ್ಖಂಡ್ ನ ಗಿರಿದಿಹ್ ಜಿಲ್ಲೆಯ ತೆಲಿದಿಹ್ ಗ್ರಾಮದಲ್ಲಿ ನಡೆದಿದೆ.
ಜಾರ್ಖಂಡ್ ನ ಗಿರಿದಿಹ್ ಜಿಲ್ಲೆಯ ಪಚಂಬಾ ಪೊಲೀಸ್ ಠಾಣೆ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಕೋಮು ಗಲಭೆ ಸೃಷ್ಟಿಸಲು ಈ ದುಷ್ಕೃತ್ಯ ನಡೆಸಲಾಗಿದೆ ಎಂದು ಶಂಕಿಸಲಾಗಿದೆ .
ವಿಷಯ ತಿಳಿದ ತಕ್ಷಣ ಸ್ಥಳೀಯ ಗ್ರಾಮಸ್ಥರು ಮಸೀದಿಗೆ ಜಮಾಯಿಸಿ ಗದ್ದಲವನ್ನು ಸೃಷ್ಟಿಸಿ, ಗಂಟೆಗಟ್ಟಲೆ ರಸ್ತೆಯನ್ನು ನಿರ್ಬಂಧಿಸಿದ್ದರು. ಅಲ್ಲದೆ ಆರೋಪಿಗಳನ್ನು ಹಿಡಿದು ಒಂದು ಕೋಣೆಯಲ್ಲಿ ಕೂಡಿಹಾಕಿದ್ದರು ಎಂದು ತಿಳಿದುಬಂದಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ರೇಣು ಮತ್ತು ಜಿಲ್ಲಾಧಿಕಾರಿ ನಮನ್ ಪ್ರೀನ್ಸ್ ಲಾಕ್ರಾ ಅವರು ಭಾರೀ ಭದ್ರತಾ ಪಡೆಯೊಂದಿಗೆ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡರು. ಈ ಸಮಯದಲ್ಲಿ, ಕೋಪಗೊಂಡ ಗ್ರಾಮಸ್ಥರು ವಾಹನವನ್ನು ಹಾನಿಗೊಳಿಸಿದ್ದಾರೆ.
ಈ ಸಂಬಂಧ ಪಚಂಬಾ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದ್ದು, ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ತಿಳಿದು ಬಂದಿದೆ.