ಮಂಗಳೂರು ಪೊಲೀಸ್ ಆಯುಕ್ತರ ಹೆಸರಿನಲ್ಲಿ ವಂಚನೆಗೆ ಯತ್ನ..!

Prasthutha|

►ಪೊಲೀಸ್ ಕಮೀಷನರನ್ನೂ ಬಿಡದ ಸೈಬರ್ ವಂಚಕರು

- Advertisement -


ಮಂಗಳೂರು:ಮಂಗಳೂರು ಪೊಲೀಸ್ ಆಯುಕ್ತ ಅನುಪ್ ಅಗರ್ವಾಲ್ ಹೆಸರಿನಲ್ಲಿ ಹಣ ಬೇಡಿಕೆ ಇಟ್ಟು ವಂಚಿಸಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ.


ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲ್ ಹೆಸರಿನಲ್ಲಿ ಈ ನಕಲಿ ವಾಟ್ಸಾಪ್ ಖಾತೆ ಸೃಷ್ಟಿ ಮಾಡಲಾಗಿದೆ. 8319051976 ನಂಬರ್ ನಲ್ಲಿ ವಾಟ್ಸಪ್ ಖಾತೆ ತೆರೆದು ಕಮೀಷನರ್ ಫೋಟೋವನ್ನು ಡಿ.ಪಿ.ಗೆ ಹಾಕಿಕೊಂಡು ವಂಚಿಸುವ ಪ್ರಯತ್ನವಾಗಿದೆ.

- Advertisement -


ಈ ವಾಟ್ಸಪ್ ಖಾತೆಯಿಂದ ನಾನು ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲ್ ಎಂದು ವಂಚಕ ಪರಿಚಯಿಸಿಕೊಂಡಿದ್ದು. ನಾನು ಆಸ್ಪತ್ರೆಗೆ ದಾಖಲಾಗಿದ್ದೇನೆ. ನನ್ನ UPI ವರ್ಕ್ ಆಗ್ತಿಲ್ಲ. ತುರ್ತಾಗಿ ಹಣ ಬೇಕಾಗಿದ್ದು, ಹಣ ವರ್ಗಾವಣೆ ಮಾಡುವಂತೆ ಸಂದೇಶ ರವಾನಿಸುತ್ತಿದ್ದಾನೆ. ಇದರ ಜೊತೆಗೆ ಒಂದು ಗಂಟೆಯೊಳಗೆ ವಾಪಸು ಹಣ ಹಾಕುವ ಭರವಸೆಯನ್ನು ವಂಚಕ ನೀಡಿದ್ದಾನೆ.


ಈ ಬಗ್ಗೆ ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲ್ ಸ್ಪಷ್ಟನೆ ನೀಡಿದ್ದಾರೆ. ಇದೊಂದು ಫೇಕ್ ಕಾಲ್ ಆಗಿದ್ದು, ಇದಕ್ಕೆ ಯಾರು ಕೂಡಾ ಪ್ರತಿಕ್ರಿಯಿಸದಂತೆ ಕೇಳಿಕೊಂಡಿದ್ದಾರೆ. ಜೊತೆಗೆ ತಮ್ಮ ಅಸಲಿ ವಾಟ್ಸಪ್ ಅಕೌಂಟ್ನಲ್ಲಿ ಸ್ಟೇಟಸ್ ಹಾಕಿ ಈ ಬಗ್ಗೆ ಯಾರು ಎಂಟರ್ಟೈನ್ ಮಾಡದಂತೆ ಕೇಳಿಕೊಂಡಿದ್ದಾರೆ.