ಗಾಝಾದಲ್ಲಿ ಮುಂದುವರೆದ ನಾಗರಿಕರ ಮೇಲಿನ ದಾಳಿ: ಘಟನೆಯೊಂದರಲ್ಲಿ ಮೂವರ ಸಾವು, ವೀಡಿಯೊ ವೈರಲ್

Prasthutha|

ಗಾಝಾಪಟ್ಟಿ: ಮುಖ್ಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ನಾಗರಿಕ ಕಾರನ್ನು ಇಸ್ರೇಲಿ ಟ್ಯಾಂಕ್‌ನಿಂದ ಸ್ಫೋಟಿಸಲಾಗಿದ್ದು, ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ನಡೆಸುತ್ತಿರುವ ಗಾಝಾ ಆರೋಗ್ಯ ಸಚಿವಾಲಯ ತಿಳಿಸಿದೆ.

- Advertisement -

ಯೂಸುಫ್ ಅಲ್ ಸೈಫಿ ಎಂಬ ಪ್ಯಾಲೆಸ್ತೀನ್ ಪತ್ರಕರ್ತ ಈ ದೃಶ್ಯವನ್ನು ರೆಕಾರ್ಡ್ ಮಾಡಿದ್ದು, ವಿಡಿಯೋ ವೈರಲ್ ಆಗಿದೆ. 41 ಸೆಕೆಂಡುಗಳ ಈ ವಿಡಿಯೋದಲ್ಲಿ ಪ್ರದೇಶದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಕಾರನ್ನು ಟ್ಯಾಂಕ್ ಗುರಿಯಾಗಿಟ್ಟುಕೊಂಡು ಹೊಡೆದುರುಳಿಸುವುದನ್ನು ತೋರಿಸುತ್ತದೆ.

ರಸ್ತೆಗೆ ಅಡ್ಡಲಾಗಿ ಇರಿಸಲಾಗಿರುವ ತಾತ್ಕಾಲಿಕ ಮಣ್ಣಿನ ತಡೆಗೋಡೆಗೆ ಕಾರು ಸಮೀಪಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ವಾಹನವು ನಿಲುಗಡೆಗೆ ಬಂದು ನಂತರ ರಿವರ್ಸ್ ತೆಗೆದುಕೊಳ್ಳುತ್ತದೆ. ಹಾಗೆ ಸ್ವಲ್ಪ ದೂರ ಹೋಗುತ್ತಿರುವಾಗ ಒಂದು ಟ್ಯಾಂಕ್ ಕಾರಿನ ಮೇಲೆ ಗುಂಡು ಹಾರಿಸುತ್ತದೆ. ಕಾರು ಹಠಾತ್ ಸ್ಫೋಟಕ್ಕೆ ಈಡಾಗುತ್ತದೆ.

- Advertisement -

ದೂರದಲ್ಲಿ ನಿಂತಿದ್ದ ಇನ್ನೊಂದು ಕಾರಿನಲ್ಲಿದ್ದ ಪತ್ರಕರ್ತ ಸೈಫ ವಿಡಿಯೋ ಚಿತ್ರೀಕರಿಸಿದ್ದಾರೆ.

Join Whatsapp