PFI ಮೇಲಿನ ದಾಳಿ ರಾಜಕೀಯ ಪ್ರೇರಿತ: ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಶನ್ ಫಾರ್ ಜಸ್ಟೀಸ್

ಬೆಂಗಳೂರು: ಇತ್ತೀಚೆಗೆ ಸಾಮಾಜಿಕ ಸಂಘಟನೆಯಾದ PFI ಅನ್ನು ಗುರಿಯಾಗಿಸಿ NIA ನಡೆಸಿದ ದಾಳಿ ರಾಜಕೀಯ ಪ್ರೇರಿತವಾಗಿದ್ದು, ಬಿಜೆಪಿ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸುತ್ತಿದೆ ಎಂದು ಅಲ್ ಇಂಡಿಯಾ ಲಾಯರ್ಸ್ ಅಸೋಸಿಯೇಶನ್ ಫಾರ್ ಜಸ್ಟೀಸ್ ಆರೋಪಿಸಿದೆ.

NIA ನಡೆಸಿದ ದಾಳಿಯ ವೇಳೆ PFI ಸಂಘಟನೆಯ ಹಲವು ನಾಯಕರು ಮತ್ತು ಕಾರ್ಯಕರ್ತರನ್ನು ಬಂಧಿಸಲಾಗಿದ್ದು, ಸುಳ್ಳಾರೋಪದ ಅಡಿಯಲ್ಲಿ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ. ಸಮಾಜದಲ್ಲಿ ತುಳಿತಕ್ಕೊಳಗಾದವರ ಅಭಿವೃದ್ಧಿಗಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ PFI ಯ ಮೇಲೆ ವೃಥಾ ಆರೋಪವನ್ನು ಹೊರಿಸಲಾಗಿದೆ. ಸಮಾಜದಲ್ಲಿನ ಪೊಲೀಸ್ ದೌರ್ಜನ್ಯ, ನಕಲಿ ಎನ್ ಕೌಂಟರ್, ಅಕ್ರಮ ಬಂಧನದ ವಿರುದ್ಧ PFI ರಾಷ್ಟ್ರದೆಲ್ಲೆಡೆ ಅಭಿಯಾನ ನಡೆಸಿರುವುದೇ ಅದರ ವಿರುದ್ಧದ ದಾಳಿಗೆ ಪ್ರಮುಖ ಕಾರಣ ಎಂದು ವಕೀಲರ ಸಂಘ ತಿಳಿಸಿದೆ.

- Advertisement -

ಸರ್ವಾಧಿಕಾರದ ಕಡೆಗೆ ಸಾಗುತ್ತಿರುವ ಕೇಂದ್ರ ಸರ್ಕಾರ ಮತ್ತು ಆರೆಸ್ಸೆಸ್ ವಿರುದ್ಧ ಧ್ವನಿಯೆತ್ತಿದ್ದಕ್ಕಾಗಿ PFI ವಿರುದ್ಧ ದಾಳಿ ನಡೆಸಿ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸುತ್ತಿರುವ ನಡೆಯನ್ನು ಆಲ್ ಇಂಡಿಯಾ ಲಾಯರ್ಸ್ ಫಾರ್ ಜಸ್ಟೀಸ್ ಖಂಡಿಸುತ್ತದೆ ಎಂದು ಅಧ್ಯಕ್ಷ ಮೈತ್ರೇಯಿ ಕೃಷ್ಣನ್, ಪ್ರಧಾನ ಕಾರ್ಯದರ್ಶಿ ಕ್ಲಿಪ್ಟನ್ ಡಿ.ರೊಝಾರಿಯೋ ತಿಳಿಸಿದ್ದಾರೆ.

- Advertisement -