ಕನ್ಹಯ್ಯಾ ಕುಮಾರ್ ಮೇಲೆ ಹಲ್ಲೆ: ವೀಡಿಯೊ ವೈರಲ್

Prasthutha|

ನವದೆಹಲಿ: ಈಶಾನ್ಯ ದೆಹಲಿಯ ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿ, ಬಿಜೆಪಿಯ ಮನೋಜ್ ತಿವಾರಿ ವಿರುದ್ಧ ಈಶಾನ್ಯ ದಿಲ್ಲಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಕನ್ಹಯ್ಯಾ ಕುಮಾರ್ ಮೇಲೆ ಹಲ್ಲೆ ನಡೆಸಿದ ಘಟನೆ ಈಶಾನ್ಯ ದೆಹಲಿಯ ಓಸ್ಮಾನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕರ್ತಾರ್ ನಗರದಲ್ಲಿ ನಡೆದಿದೆ.

- Advertisement -

ಬೆಂಬಲಿಗನ ಸೋಗಿನಲ್ಲಿ ಬಂದು ಹೂವಿನ ಹಾರವೊಂದನ್ನು ಕನ್ಹಯ್ಯಾ ಕುಮಾರ್ ಕೊರಳಿಗೆ ಹಾಕಿದ ಬಳಿಕ ಕೆನ್ನೆಗೆ ಬಾರಿಸಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಕಾಂಗ್ರೆಸ್ ಹಾಗೂ ಇತರ ಕಾರ್ಯಕರ್ತರು ಆತನನ್ನು ಹಿಡಿದಿದ್ದಾರೆ.

ಕನ್ಹಯ್ಯಾ ಕುಮಾರ್ ಅವರು ಕರ್ತಾರ್ ನಗರದಲ್ಲಿರುವ ಆಪ್ ಕಚೇರಿಯಲ್ಲಿ ಛಾಯಾ ಗೌರವ್ ಶರ್ಮ ಅವರೊಂದಿಗೆ ಸಭೆ ನಡೆಸಿ ಹೊರ ಬಂದಾಗ ಈ ಘಟನೆ ನಡೆದಿದೆ.

- Advertisement -

ಕನ್ಹಯ್ಯಾ ಕುಮಾರ್ ಅವರಿಗೆ ಹಲ್ಲೆ ನಡೆಸಿದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಬಿಜೆಪಿ ಅಭ್ಯರ್ಥಿ ಮನೋಜ್ ತಿವಾರಿ ಬೆಂಬಲಗನೋರ್ವ ಪೂರ್ವ ಯೋಜನೆಯಂತೆ ಈ ಕೃತ್ಯವೆಸಗಿರುವ ಸಾಧ್ಯತೆಯನ್ನು ಊಹಿಸಲಾಗಿದೆ.

ವೈರಲ್ ಆಗಿರುವ ವಿಡಿಯೋವೊಂದರಲ್ಲಿ ವಿಡಿಯೋ ಮಾಡುತ್ತಿದ್ದ ಸುದರ್ಶನ್ ನ್ಯೂಸ್‌(ಬಲಪಂಥೀಯ ಸುದ್ದಿ ಹರಡುವ ಚಾನೆಲ್)ನ ವ್ಯಕ್ತಿ, ಈಗ ಕನ್ಹಯ್ಯ ಕುಮಾರ್‌ಗೆ ಹೊಡೆತ ಬೀಳಲಿದೆ ಎಂದು ಹಿಂದಿಯಲ್ಲಿ ಹೇಳುತ್ತಿರುವುದು ಕೇಳಿಸುತ್ತಿದೆ

ಈ ಘಟನೆಯ ಸಮಯದಲ್ಲಿಯೇ ಆಮ್ ಆದ್ಮಿ ಪಕ್ಷದ ಮಹಿಳಾ ಕೌನ್ಸಿಲರ್ ಛಾಯಾ ಶರ್ಮಾ ಅವರೊಂದಿಗೂ ಬಿಜೆಪಿ ಕಾರ್ಯಕರ್ತರು ಅನುಚಿತವಾಗಿ ವರ್ತಿಸಿದ್ದು, ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಘಟನೆಯ ಬೆನ್ನಿಗೇ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಆ ವಿಡಿಯೊದಲ್ಲಿ ಇಬ್ಬರು ವ್ಯಕ್ತಿಗಳು ಘಟನೆಯ ಹೊಣೆ ಹೊತ್ತುಕೊಂಡಿದ್ದಾರೆ.



Join Whatsapp