ಶಿವಮೊಗ್ಗದಲ್ಲಿ ಪತ್ರಕರ್ತರ ಮೇಲೆ ಹಲ್ಲೆ, ಬೆದರಿಕೆ; ಪತ್ರಕರ್ತರ ಸಂಘದಿಂದ ಖಂಡನೆ

Prasthutha|

ಶಿವಮೊಗ್ಗ: ಬಜರಂಗ ದಳದ ಕಾರ್ಯಕರ್ತ ಹರ್ಷ ಕೊಲೆ ಅತ್ಯಂತ ಖಂಡನಾರ್ಹ. ಆದರೆ, ಇದನ್ನು ಖಂಡಿಸುವ ಭರದಲ್ಲಿ ಕೆಲವು ಸಂಘಟನೆಗಳು ಪತ್ರಕರ್ತರಿಗೆ ಬೆದರಿಕೆವೊಡ್ಡುವ, ಹಲ್ಲೆ ನಡೆಸುವ ಪ್ರಕರಣಗಳು ಅಲ್ಲಲ್ಲಿ ನಡೆದಿದ್ದು, ಈ ಧಮನಕಾರಿ ನೀತಿಯನ್ನು ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ತೀವ್ರವಾಗಿ ಖಂಡಿಸುತ್ತದೆ.

- Advertisement -

ಈ ಸಂಬಂಧವಾಗಿ ಹೇಳಿಕೆ ನೀಡಿರುವ, ಸಂಘದ ಅಧ್ಯಕ್ಷ ಕೆ. ವಿ. ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ವೈದ್ಯ, ನಗರ ಕಾರ್ಯದರ್ಶಿ ವಿ. ಟಿ. ಅರುಣ್ ಹಾಗೂ ರಾಜ್ಯ ಸಮಿತಿ ಸಂಚಾಲಕ ಎನ್. ರವಿಕುಮಾರ್ ಸೇರಿದಂತೆ ಕಾರ್ಯಕಾರಿ ಮಂಡಳಿ ಸದಸ್ಯರು, ಪತ್ರಕರ್ತರು ಪೂರ್ವಾಗ್ರಹ ಪೀಡಿತರಾಗಿ ಕಾರ್ಯನಿರ್ವಹಿಸುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.

ಹರ್ಷ ಹತ್ಯೆಯ ಬೆನ್ನಲ್ಲೆ ನಡೆದ ಘಟನಾವಳಿಗಳಿಂದ ಪ್ರಕ್ಷುಬ್ದಗೊಂಡಿರುವ ಶಿವಮೊಗ್ಗದಲ್ಲಿ  ಮತೀಯ ಶಕ್ತಿಗಳು ಶಾಂತಿ – ಸೌಹಾರ್ದತೆ ಬಯಸುವ ಪತ್ರಕರ್ತರನ್ನು ಗುರಿಯಾಗಿಸಿಕೊಂಡು ಬೆದರಿಕೆ ಹಾಕುವ ಆತಂಕಕಾರಿ ಬೆಳವಣಿಗೆಗಳು ನಡೆಯಲಾರಂಭಿಸಿವೆ.                          

- Advertisement -

ಹರ್ಷನ ಶವ ಮೆರವಣಿಗೆ ಸಂದರ್ಭದಲ್ಲಿ ಕಲ್ಲು ತೂರಾಟದಲ್ಲಿ ತೊಡಗಿದ್ದವರ ಪೋಟೋ ಚಿತ್ರೀಕರಣ ಮಾಡುತ್ತಿದ್ದ ಪ್ರಜಾವಾಣಿ ಹಿರಿಯ ವರದಿಗಾರ ಚಂದ್ರಹಾಸ ಹಿರೇಮಳಲಿ, ಪತ್ರಕರ್ತ  ಬಿ. ರೇಣುಕೇಶ್  ಅವರ ಮೊಬೈಲ್ ಮತ್ತು ಕ್ಯಾಮರಾಗಳನ್ನು ಮೆರವಣಿಗೆಯಲ್ಲಿದ್ದ ಗುಂಪೊಂದು ಕಿತ್ತುಕೊಳ್ಳಲು ಯತ್ನಿಸಿತ್ತು. ಇದೇ ಸಂದರ್ಭದಲ್ಲಿ ಪೊಟೋ ಜರ್ನಲಿಸ್ಟ್ ನಿಂಗನಗೌಡ, ಮತ್ತು ವರದಿಗಾರ  ರಫೀಕ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಹರ್ಷ ಹತ್ಯೆ ಖಂಡಿಸಿ ತೀರ್ಥಹಳ್ಳಿಯಲ್ಲಿ ಬಜರಂಗದಳ ನಡೆಸಿದ ಪ್ರತಿಭಟನಾ ಸಭೆಯಲ್ಲಿ ಬಹಿರಂಗವಾಗಿ ಪತ್ರಕರ್ತರಿಗೆ ಬೆದರಿಕೆ ಹಾಕಲಾಗಿದೆ. ಸ್ಥಳೀಯ ’ಛಲಗಾರ’ ಪತ್ರಿಕೆಯ ಸಂಪಾದಕ ನಿಶಾಂತ್ ಸೇರಿದಂತೆ ಹಲವಾರು  ವರದಿಗಾರರನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಜೀವ ಬೆದರಿಕೆ ಹಾಕುವ ಮೂಲಕ  ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ  ಪ್ರಯತ್ನಗಳು ನಡೆದಿವೆ. 

ಜಿಲ್ಲೆಯಲ್ಲಿ ಶಾಂತಿ ಮತ್ತು ಸೌಹಾರ್ದತೆ ನೆಲೆಸುವ ನಿಟ್ಟಿನಲ್ಲಿ ನಿಷ್ಪಕ್ಷಪಾತವಾಗಿ ವರದಿ ಮಾಡುವ ಪತ್ರಕರ್ತರನ್ನೇ, ಸುದ್ದಿ ಮಾಧ್ಯಮಗಳನ್ನು ನಿರ್ಧಿಷ್ಟವಾಗಿ ಗುರಿ ಮಾಡಿ ಹಲ್ಲೆ ನಡೆಸಿರುವುದು, ಬೆದರಿಕೆ ಹಾಕುತ್ತಿರುವುದು ಅತ್ಯಂತ ಖಂಡನೀಯ. ಈ ಘಟನಾವಳಿಗಳನ್ನು ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ತೀವ್ರವಾಗಿ ಖಂಡಿಸಿದೆ.

ತೀರ್ಥಹಳ್ಳಿಯ ಛಲಗಾರ ಪತ್ರಿಕೆ ಸಂಪಾದಕ ನಿಶಾಂತ್ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗವಾಗಿ ಜೀವ ಬೆದರಿಕೆ ಒಡ್ಡುತ್ತಿರುವವರ ಮತ್ತು ಪತ್ರಕರ್ತರ ಮೇಲೆ ಹಲ್ಲೆ ನಡೆಸಿದವರ ವಿರುದ್ದ ತಕ್ಷಣವೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ  ಅಧ್ಯಕ್ಷರಾದ ಕೆ.ವಿ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ವೈದ್ಯ, ನಗರ ಕಾರ್ಯದರ್ಶಿ ವಿ. ಟಿ. ಅರುಣ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಆಗ್ರಹಿಸಿದ್ದಾರೆ

ಗೃಹ ಸಚಿವರು ಈ ನಿಟ್ಟಿನಲ್ಲಿ ಗಮನ ಹರಿಸಿ, ಪತ್ರಕರ್ತರಿಗೆ ಸೂಕ್ತ ರಕ್ಷಣೆ ನೀಡುವಲ್ಲಿ ಕ್ರಮ ವಹಿಸಬೇಕು. ಹಾಗೂ ಬೆದರಿಕೆವೊಡ್ಡುವವರು, ಹಲ್ಲೆಕೋರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮನವಿ ಮಾಡಿದೆ.

Join Whatsapp