ರೈತ ನಾಯಕ ರಾಕೇಶ್ ಟಿಕಾಯತ್ ಮೇಲಿನ ದಾಳಿಯನ್ನು ಸಹಿಸಲು ಸಾಧ್ಯವಿಲ್ಲ : SDPI

Prasthutha|

ಬೆಂಗಳೂರು: ಇಂದು‌ ಬೆಂಗಳೂರಿಗೆ ರೈತ ಸಂಘದ ಸಭೆಯ ನಿಮಿತ್ತ ಆಗಮಿಸಿದ್ದ ರೈತ ಹೋರಾಟದ ಪ್ರಮುಖ ನಾಯಕರಾದ ರಾಕೇಶ್ ಟಿಕಾಯತ್ ಅವರು ತನ್ನ ಜೊತೆಗಿದ್ದ ಇತರ ರೈತ ಹೋರಾಟಗಾರರೊಂದಿಗೆ ಪತ್ರಿಕಾಗೋಷ್ಠಿ ನಡೆಸುತ್ತಿದ್ದ ಸಂದರ್ಭದಲ್ಲಿ ಅವರ ಮೇಲೆ ಆರೆಸ್ಸೆಸ್ ಹಲ್ಲೆಕೋರರು ಮಸಿ ಬಳಿದು ಹಲ್ಲೆ ಯತ್ನ ನಡೆಸಿರುವುದನ್ನು SDPI ಸಹಿಸುವುದಿಲ್ಲ ಮತ್ತು ಇದನ್ನು ಖಂಡಿಸಿ ರಾಜ್ಯಾಧ್ಯಂತ ಪಕ್ಷವು ಪ್ರತಿಭಟನೆ ನಡೆಸಲಿದೆ ಎಂದು ಹೇಳಿದ್ದಾರೆ.

- Advertisement -

ಹಲ್ಲೆಕೋರರನ್ನು ತಕ್ಷಣದಲ್ಲೇ ಬಂಧಿಸಬೇಕು, ಈ ಕುಕೃತ್ಯಕ್ಕೆ ಕಠಿಣ ಪ್ರಕರಣವನ್ನು ದಾಖಲಿಸಿ ಶಿಕ್ಷೆಗೆ ಒಳ ಪಡಿಸ ಬೇಕೆಂದು SDPI ಆಗ್ರಹಿಸುತ್ತದೆ.

ದೇಶದಲ್ಲಿ ರೈತ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಒಬ್ಬ ಪ್ರಮುಖ ನಾಯಕನಿಗೆ ಭದ್ರತೆ ಕಲ್ಪಿಸುವಲ್ಲಿ ಸರಕಾರ ಮತ್ತು ಗೃಹ ಇಲಾಖೆ ವಿಫಲವಾಗಿರುವುದನ್ನು ನೋಡಿದರೆ ಈ ಕೃತ್ಯ ಬಿಜೆಪಿ ಸರಕಾರದಿಂದಲೇ ಪ್ರಾಯೋಜಿತಗೊಂಡಿದೆಯೇ ಎನ್ನುವ ಸಂಶಯ ಮೂಡುತ್ತಿದೆ. ಸರಕಾರ ತನ್ನ ವೈಫಲ್ಯತೆ ಮತ್ತು ಬೇಜವಾಬ್ದಾರಿತನವನ್ನು ಒಪ್ಪಿ ಕೊಂಡು, ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ಮೇಲೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು SDPI ಆಗ್ರಹಿಸುತ್ತದೆ.

- Advertisement -

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸರಕಾರಕ್ಕೆ ಒಲವು ಇಲ್ಲದ ರೀತಿ ಭಾಸವಾಗುತ್ತಿದೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರ ಹಿಡಿದ ದಿನದಿಂದ ಒಂದಲ್ಲಾ ಒಂದು ಅಘಾತಕಾರಿ ಕೃತ್ಯಗಳನ್ನು ಸಂಘಪರಿವಾರ ಮತ್ತು ಬಿಜೆಪಿ ಯ ನಾಯಕರ ಪ್ರಚೋದನೆಯಿಂದ ಅದರ ಕಾರ್ಯಕರ್ತರು ಎಸಗುತ್ತಿದ್ದಾರೆ. ಸರಕಾರ ಬೇಜವಾಬ್ದಾರಿತನವನ್ನು ಬದಿಗಿಟ್ಟು ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಖಾತರಿ ಪಡಿಸಲು ತಯಾರಾಗಬೇಕೆಂದು SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಆಗ್ರಹಿಸಿದ್ದಾರೆ.

Join Whatsapp