ಡಿಕೆ ಸುರೇಶ್ ಮನೆ ಮೇಲೆ ದಾಳಿ

Prasthutha|

ಬೆಂಗಳೂರು: ಕೇಂದ್ರ ಸರಕಾರದ ಬಜೆಟ್ ಸಂಬಂಧವಾಗಿ ಪ್ರತಿಕ್ರಿಯಿಸುತ್ತಾ, ಪ್ರತ್ಯೇಕ ರಾಷ್ಟ್ರ ಕುರಿತು ಸಂಸದ ಡಿ.ಕೆ. ಸುರೇಶ್ ನೀಡಿದ್ದ ಹೇಳಿಕೆಯೊಂದು ಕೈ ಪಾಳಯ ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ. ಹೇಳಿಕೆ ವಿರುದ್ಧವಾಗಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡಿ ಡಿ.ಕೆ.ಸುರೇಶ್ ಮನೆ ಮೇಳೆ ದಾಳಿ ಮಾಡಿದ್ದಾರೆ.

- Advertisement -

ಇಂದು ಬೆಳಗ್ಗೆ ಬಿಜೆಪಿ ಕಾರ್ಯಕರ್ತರು ಬೆಂಗಳೂರಿನಲ್ಲಿರುವ ಡಿ.ಕೆ.ಸುರೇಶ್ ಅವರ ನಿವಾಸದ ಮೇಲೆ ದಾಳಿ ಮಾಡಿದ್ದಾರೆ. ಪೊಲೀಸರು ಮನೆ ಸುತ್ತಮುತ್ತ ಬಿಗಿಭದ್ರತೆ ಮಾಡಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿರುವ ಮಧ್ಯಂತರ ಬಜೆಟ್‌ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಸಂಸದ ಡಿ.ಕೆ. ಸುರೇಶ್‌, ಕೇಂದ್ರದ ತಾರತಮ್ಯ ಹೀಗೆ ಮುಂದುವರೆದರೆ ಭಾರತ ವಿಭಜನೆ ಆಗಬೇಕಾಗಬಹುದು ಎಂದು ಹೇಳಿದ್ದಾರೆಂದು ವರದಿಯಾಗಿದೆ.

- Advertisement -

ಸಂಸದ ಡಿ.ಕೆ. ಸುರೇಶ್‌ ಬಜೆಟ್‌ ಬಗ್ಗೆ ಪ್ರತಿಕ್ರಿಯೆ ನೀಡುವಾಗ, ಉತ್ತರ ಭಾರತ ಹಾಗೂ ದಕ್ಷಿಣ ಭಾರತ ಎಂಬುದಾಗಿ ತಾರತಮ್ಯ ಮಾಡುತ್ತಿದ್ದು, ಹೀಗೇ ಮುಂದುವರಿದರೆ ದೇಶವನ್ನು ವಿಭಜನೆ ಮಾಡಬೇಕಾಗುತ್ತದೆ ಎಂದಿದ್ದಾರೆ ಎಂದು ಬಿಜೆಪಿ ಟೀಕ್ರಾಪ್ರವಾಹ ಮಾಡುತ್ತಿದೆ. ಈ ಮಧ್ಯೆ ಸುರೇಶ್ ಮನೆ ಮೇಲೆ ಬಿಜೆಪಿ ಕಾರ್ಯಕರ್ತರು ದಾಳಿ ಮಾಡಿದ್ದಾರೆ..

Join Whatsapp