ಜೆರುಸಲೇಂ: ಪಶ್ಚಿಮದಂಡೆಯಲ್ಲಿ ಇಸ್ರೇಲ್ ಸೈನಿಕರಿದ್ದ ಕಾವಲು ಠಾಣೆಯ ಮೇಲೆ ಪ್ಯಾಲೆಸ್ತೀನ್ ವ್ಯಕ್ತಿಯೊಬ್ಬ ತನ್ನ ವಾಹನವನ್ನು ನುಗ್ಗಿಸಿದ ಘಟನೆಯಲ್ಲಿ ಭಾರತೀಯ ಮೂಲದ ಇಸ್ರೇಲ್ ಯೋಧ ಮೃತಪಟ್ಟಿರುವುದಾಗಿ ಇಸ್ರೇಲ್ ಸೇನೆ ಹೇಳಿದೆ.
24 ವರ್ಷದ ಜೆರಿ ಗಿಡಿಯಾನ್ ಹಂಘಲ್ ಎಂಬ ಯೋಧ ಎಂದು ಅದು ತಿಳಿಸಿದೆ. ಆತ ಕೆಫಿರ್ ಬ್ರಿಗೇಡ್‍ನ ನಹ್ಷಾನ್ ಬಟಾಲಿಯನ್‍ನಲ್ಲಿ ಸ್ಟಾಫ್ ಸರ್ಜೆಂಟ್ ಆಗಿದ್ದ ಎಂದು ಇಸ್ರೇಲ್ ಸೇನೆ ಹೇಳಿದೆ.
ಶಂಕಿತ ಆರೋಪಿಯನ್ನು ಪಶ್ಚಿಮದಂಡೆಯ ರಫಾತ್ ನಗರದ ನಿವಾಸಿ ಹಯಿಲ್ ಧೈಫಲ್ಲಾಹ್ ಎಂದು ಗುರುತಿಸಿರುವುದಾಗಿಯೂ ಇಸ್ರೇಲ್ ಸೇನೆ ಹೇಳಿದೆ.
ಕೆಫಿರ್ ಬ್ರಿಗೇಡ್‍ನ ನಹ್ಷಾನ್ ಬಟಾಲಿಯನ್‍ನಲ್ಲಿ ಸ್ಟಾಫ್ ಸರ್ಜೆಂಟ್ ಆಗಿದ್ದ ಎಂದು ಇಸ್ರೇಲ್ ಸೇನೆ ಹೇಳಿದೆ.