ಮೌಲಾನಾ ಕಲೀಮ್ ಸಿದ್ದೀಕಿ ನಡೆಸುತ್ತಿದ್ದ ಮದರಸಾ ಮೇಲೆ ಎ.ಟಿ.ಎಸ್ ದಾಳಿ

Prasthutha|

ಹೈದರಾಬಾದ್: ಧಾರ್ಮಿಕ ಮತಾಂತರ ಆರೋಪದಲ್ಲಿ ಬಂಧಿತರಾದ ಖ್ಯಾತ ಇಸ್ಲಾಮಿಕ್ ವಿದ್ವಾಂಸ ಮೌಲಾನಾ ಕಲೀಂ ಸಿದ್ದೀಕಿ ಅವರ ಬಂಧನದ ನಂತರ ಉ.ಪ್ರ ಭಯೋತ್ಪಾದನಾ ನಿಗ್ರಹ ದಳ (ಎ.ಟಿ.ಎಸ್) ಇಂದು ದೆಹಲಿಯ ಶಾಹೀನ್ ಬಾಗ್ ನಲ್ಲಿರುವ ಮದರಸಾ ಮೇಲೆ ದಾಳಿ ನಡೆಸಿದೆ.

- Advertisement -

ಈ ಹಿಂದೆ ಮೌಲಾನಾ ಮುಹಮ್ಮದ್ ಉಮರ್ ಗೌತಮ್ ಮತ್ತು ಮುಫ್ತಿ ಖಾಝಿ ಜಹಾಂಗೀರ್ ಆಲಂ ಖಾಸ್ಮಿ ಅವರನ್ನು ದೆಹಲಿಯ ಜಾಮೀಯಾ ನಗರದಲ್ಲಿ ಸುಳ್ಳಾರೋಪದಲ್ಲಿ ಬಂಧಿಸಲಾಗಿತ್ತು.

ಇಂದು ನಡೆದ ಮಹತ್ವದ ಬೆಳವಣಿಗೆಯೊಂದರಲ್ಲಿ ನ್ಯಾಯಾಲಯದ ಆದೇಶದಂತೆ ಎ.ಟಿ.ಎಸ್ ಮದರಸಾದ ಮೇಲೆ ದಾಳಿ ನಡೆಸಿ ನಿಧಿ ಸಂಗ್ರಹಕ್ಕೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.

- Advertisement -

ಮೌಲಾನಾ ಕಲೀಮ್ ಸಿದ್ದೀಕಿ ಅವರು ದೆಹಲಿಯ ಶಾಹೀನ್ ಬಾಗ್ ನಲ್ಲಿ ಜಾಗತಿಕ ಶಾಂತಿ ಕೇಂದ್ರ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದು, ಪ್ರಸಕ್ತ ಜಾಗತಿಕ ಶಾಂತಿ ಕೇಂದ್ರ ಮತ್ತು ಜಾಮೀಯಾ ಇಮಾಮ್ ವಲಿಯುಲ್ಲಾಹ್ ಟ್ರಸ್ಟ್ ನ ಅಧ್ಯಕ್ಷರಾಗಿದ್ದಾರೆ.
ಮೌಲಾನಾ ಸಿದ್ದೀಕ್ ಅವರ ಟ್ರಸ್ಟ್ ಗೆ ಬಹ್ರೈನ್ ಸೇರಿದಂತೆ ವಿದೇಶಿ ಮೂಲದಿಂದ ಕೋಟ್ಯಂತರ ರೂಪಾಯಿಗಳನ್ನು ಅಕ್ರಮವಾಗಿ ಸಂಪಾದನೆ ಮಾಡಿದ್ದಾರೆ ಎಂಬುದು ತನಿಖೆಯಿಂದ ಸಾಬೀತಾಗಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ತನಿಖೆ ನಡೆಸಲು ಎ.ಟಿ.ಎಸ್ 6 ತಂಡಗಳನ್ನು ರಚಿಸಿದೆ.

ಪ್ರಸಕ್ತ ಉ.ಪ್ರ ಪೊಲೀಸರು ಮೌಲಾನಾ ಗೌತಮ್, ಮೌಲಾನ ಕಲೀಂ ಸಿದ್ದೀಕಿ, ರಾಮೇಶ್ವರ ಕವಾಡೆ ಅಲಿಯಾಸ್ ಆಡಮ್, ಭೂಪ್ರಿಯಾ ಬಂಡೋ ಅಲಿಯಾಸ್ ಅರ್ಸಲಾನ್ ಮುಸ್ತಫಾ ಮತ್ತು ಕೌಸರ್ ಆಲಂ ಸೇರಿದಂತೆ 14 ಮಂದಿಯನ್ನು ಬಂಧಿಸಿತ್ತು

Join Whatsapp