ಅನ್ಯಾಯ, ಅರಾಜಕತೆಯ ವಿರುದ್ಧ ಧ್ವನಿ ಎತ್ತದಿದ್ದರೆ ಸಮಾಜದಲ್ಲಿ ದೌರ್ಜನ್ಯ ಹೆಚ್ಚಳ: ಅಯ್ಯೂಬ್ ಅಗ್ನಾಡಿ

Prasthutha|

ಪುತ್ತೂರು: ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವದ ಪ್ರಯುಕ್ತ ಪುತ್ತೂರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ  ಧ್ವಜಾರೋಹಣ ಕಾರ್ಯಕ್ರಮ ಬನ್ನೂರಿನಲ್ಲಿ ನಡೆಯಿತು. ಧ್ವಜಾರೋಹಣ ಕಾರ್ಯಕ್ರಮವನ್ನು ಪಾಪ್ಯುಲರ್ ಫ್ರಂಟ್ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಅಯ್ಯೂಬ್ ಅಗ್ನಾಡಿ ನೆರವೇರಿಸಿದರು.

- Advertisement -

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅಯ್ಯೂಬ್ ಅಗ್ನಾಡಿ, ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷ ತುಂಬಿದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದ ಹೋರಾಟಗಾರರನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಬ್ರಿಟಿಷರನ್ನು ದೇಶದಿಂದ ತೊಲಗಿಸಲು ಭಾರತೀಯರು, ವಿವಿಧ ಜಾತಿ ಧರ್ಮಗಳ ನಾಯಕರು ಒಗ್ಗಟ್ಟಿನಿಂದ ಹೋರಾಡಿದ ಫಲವಾಗಿ ದೇಶ ಸ್ವತಂತ್ರವಾಯಿತು. ಎಲ್ಲರಿಗೂ ಸಮಾನತೆ, ನ್ಯಾಯ ಸಿಗಬೇಕೆಂಬ ಉದ್ದೇಶದಿಂದ ಸಂವಿಧಾನವನ್ನು ರಚಿಸಲಾಯಿತು. ಆದರೆ ಪ್ರಸ್ತುತ ಭಾರತ ದೇಶದಲ್ಲಿ ನಿರಪರಾಧಿಗಳು ಶಿಕ್ಷಿಸಲ್ಪಡುತ್ತಿದ್ದಾರೆ, ನ್ಯಾಯ ವಂಚಿತರಾಗುತ್ತಿದ್ದಾರೆ. ದೇಶದಲ್ಲಿ ಬಡತನ, ನಿರುದ್ಯೋಗ ಸಮಸ್ಯೆ ಮುಂತಾದ ಸಮಸ್ಯೆಗಳಿಂದ ಹೆಚ್ಚುತ್ತಿದ್ದು ಪರಿಹಾರ ನೀಡಬೇಕಾದ ಸರ್ಕಾರಗಳು ಮೌನವಹಿಸಿವೆ. ಅಕ್ರಮ, ಅನ್ಯಾಯಗಳಿಂದ ಸಮಾಜ ಭಯಭೀತರಾಗಿದ್ದು ಪ್ರಶ್ನಿಸುವವರನ್ನು ದಮನಿಸುವ ಕಾರ್ಯಗಳು ಆಡಳಿತಗಾರರು ನಡೆಸುತ್ತಿದ್ದಾರೆ. ಯಾವಾಗ ಒಂದು ವ್ಯವಸ್ಥೆಯಲ್ಲಿ ಪ್ರಶ್ನಿಸುವುದನ್ನು ನಿಲ್ಲಿಸುತ್ತೇವೆಯೋ ಅಂದು ಅಲ್ಲಿ ಅರಾಜಕತೆ ನಿರ್ಮಾಣವಾಗುತ್ತದೆ. ಅರಾಜಕತೆಯ ವಿರುದ್ಧ ಮಾತನಾಡದೇ ಹೋದಾಗ ಸಮಾಜದಲ್ಲಿ ದೌರ್ಜನ್ಯಗಳು ಹೆಚ್ಚಾಗುತ್ತವೆ ಎಂದರು.

ಆದ್ದರಿಂದ ಒಂದು ದಿನದ ಸ್ವಾತಂತ್ರ್ಯ ದಿನಾಚರಣೆಗೆ ಸೀಮಿತಗೊಳ್ಳದೆ ಎಲ್ಲರಿಗೂ ಸಮಾನ ನ್ಯಾಯ, ರಕ್ಷಣೆ, ಸದೃಢ ಭಾರತ ನಿರ್ಮಾಣಕ್ಕೆ ಯುವ ಸಮೂಹ ಸಜ್ಜಾಗಬೇಕಾಗಿದೆ ಎಂದರು.

- Advertisement -

ಪಾಪ್ಯುಲರ್ ಫ್ರಂಟ್ ಪುತ್ತೂರು ಜಿಲ್ಲಾಧ್ಯಕ್ಷ ಜಾಬಿರ್ ಅರಿಯಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು.

ಕಾರ್ಯಕ್ರಮದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ ದ.ಕ ಜಿಲ್ಲಾ ಸಮಿತಿ ಸದಸ್ಯ ಝಕರಿಯ ಗೋಲ್ತಮಜಲು, ಪಿಎಫ್ ಐ ಕಬಕ ಡಿವಿಝನ್ ಅಧ್ಯಕ್ಷ ಸಮೀರ್ ಮುರ, ಬನ್ನೂರು ಏರಿಯಾ ಅಧ್ಯಕ್ಷ ಫವಾಝ್ ಬನ್ನೂರು, ಎಸ್ ಡಿಪಿಐ ನಗರಾಧ್ಯಕ್ಷ ಸಿರಾಜ್ ಎ.ಕೆ ಸೇರಿದಂತೆ ಸಂಘಟನೆಯ ಕಾರ್ಯಕರ್ತರು, ಹಿತೈಷಿಗಳು ಉಪಸ್ಥಿತರಿದ್ದರು.



Join Whatsapp