ಅರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಅತೀಕುರ್ರಹ್ಮಾನನ್ನು ಜೈಲಿನಿಂದ ಏಮ್ಸ್‌ಗೆ ದಾಖಲಿಸಿ ಚಿಕಿತ್ಸೆ ನೀಡಿ: ಪತ್ನಿ ಆಗ್ರಹ

Prasthutha|

ನವದೆಹಲಿ: ಹತ್ರಾಸ್ ಪ್ರಕರಣ ಸಂಬಂಧ ಉತ್ತರ ಪ್ರದೇಶ ಪೊಲೀಸರಿಂದ ಯುಎಪಿಎ ದಾಖಲಿಸಲ್ಪಟ್ಟು ಸದ್ಯ ಜೈಲಿನಲ್ಲಿ ಕಳೆಯುತ್ತಿರು ವಿದ್ಯಾರ್ಥಿ ನಾಯಕ ಅತೀಕುರ್ರಹ್ಮಾನ್ ಆರೋಗ್ಯ ಸ್ಥಿತಿ ಶೋಚನೀಯವಾಗಿದ್ದು, ಶೀಘ್ರವೇ ಅವರನ್ನು ದೆಹಲಿ ಏಮ್ಸ್‌ಗೆ ದಾಖಲಿಸಿ ಚಿಕಿತ್ಸೆ ನೀಡಬೇಕಾಗಿದೆ ಎಂದು ಅವರ ಪತ್ನಿ ಸಂಜಿದಾ ರಹ್ಮಾನ್ ಆಗ್ರಹಿಸಿದ್ದಾರೆ.

- Advertisement -

ದೆಹಲಿಯಲ್ಲಿ ಮಲಯಾಳಂ ಮಾಧ್ಯಮವೊಂದರ ಜೊತೆ ಮಾತನಾಡಿದ ಸಂಜಿದಾ, ಹೃದಯ ಸಂಬಂಧ ಸಮಸ್ಯೆಯಿಂದಾಗಿ ಅತೀಕ್ 2007ರಿಂದಲೇ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೆಲ ತಿಂಗಳ ಹಿಂದೆಯಷ್ಟೆ ಅವರು, ತೆರೆದ ಹೃದಯದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಆದರೆ‌ ಆ ಬಳಿಕ ಜೈಲಿನಲ್ಲಿ ಹೆಚ್ಚುವರಿ ಚಿಕಿತ್ಸೆ ಸಿಕ್ಕಿರಲಿಲ್ಲ. ಇದರಿಂದಾಗಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವಿವರಿಸಿದ್ದಾರೆ.

ಲಕ್ನೋದ ಕಿಂಗ್ ಜಾರ್ಜ್ ಆಸ್ಪತ್ರೆಗೆ ಅವರನ್ನು ದಾಖಲಿಸಲಾಯಿತಾದರೂ, ಅಗತ್ಯ ಚಿಕಿತ್ಸೆ ನೀಡದೇ ಅವರನ್ನು ಮತ್ತೆ ಜೈಲಿಗೆ ದಾಖಲಿಸಲಾಗಿದೆ. ಆದರೆ ಅತೀಕ್‌ಗೆ ಈಗ ಸ್ವತಃ ಮಕ್ಕಳನ್ನು ಕೂಡಾ ಗುರುತಿಸಲು ಸಾಧ್ಯವಾಗುತ್ತಿಲ್ಲ ಎಂದ ಸಂಜಿದಾ, ಮಕ್ಕಳು ತಂದೆಯನ್ನು ಕಾಣಲು ಹಠ ಮಾಡುತ್ತಿದ್ದು, ಅಪ್ಪ ಯಾವಾಗ ಮರಳಿ ಬರುತ್ತಾರೆ ಎಂದು ನನ್ನನ್ನು ಪ್ರಶ್ನಿಸುತ್ತಿದ್ದಾರೆ ಎಂದು ಗದ್ಗತಿತರಾದರು.

- Advertisement -

2020ರ ಹತ್ರಾಸ್ ಸಾಮೂಹಿಕ ಅತ್ಯಾಚಾರ, ಕೊಲೆ ಘಟನೆಯ ಬಳಿಕ ಅಲ್ಲಿಗೆ ಪತ್ರಕರ್ತ ಸಿದ್ದೀಕ್ ಕಾಪ್ಪನ್ ಜೊತೆ ತೆರಳುತ್ತಿದ್ದ ಅತೀಕುರ್ರಹ್ಮಾನ್‌ರನ್ನು ಉತ್ತರ ಪ್ರದೇಶ ಪೊಲೀಸರು ಯುಎಪಿಎ ದಾಖಲಿಸಿ ಬಂಧಿಸಿದ್ದರು.

Join Whatsapp