ಬೀಜಿಂಗ್: ಚೀನ ರಾಜಧಾನಿಯಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಟೈಫೂನ್ ಡೆಕ್ಸುರಿಯಾ ಚಂಡಮಾರುತ ಬೀಜಿಂಗ್ ಅನ್ನು ಅಕ್ಷರಶಃ ಮುಳುಗಿಸಿ ಹಾಕಿದೆ.
ಪ್ರವಾಹದಿಂದ ಉಂಟಾ ಗಿರುವ ಅವಘಡಗಳಲ್ಲಿ ಈಗಾಗಲೇ 21 ಮಂದಿ ಮೃತಪಟ್ಟಿದ್ದಾರೆ 26 ಮಂದಿ ನಾಪತ್ತೆಯಾಗಿದ್ದಾರೆ.
ಕಳೆದ ಶನಿವಾರದಿಂದ ಬುಧವಾರದ ವೇಳೆಗೆ ನಗರದಲ್ಲಿ 744.8 ಮಿಲಿ ಮೀಟರ್ನಷ್ಟು ಮಳೆ ಯಾಗಿದ್ದು, ರಾಜಧಾನಿಯ ಹೆಬೈ ಪ್ರಾಂತವೂ ಸಂಪೂರ್ಣ ಪ್ರವಾಹದಿಂದ ಹಾನಿಗೊಳಗಾಗಿದೆ.
ಪ್ರವಾಹದಿಂದ ವಿದ್ಯುತ್ ಅಭಾವ ಸೃಷ್ಟಿಯಾಗಿದ್ದು, ಕುಡಿಯುವ ನೀರನ್ನು ಪೂರೈಸುವ ಪೈಪ್‌ಗಳಿಗೂ ಹಾನಿಯಾಗಿದೆ ಎಂದು ಹೇಳಿದೆ.
ಝುಝೌ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಎಷ್ಟು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನುವ ಮಾಹಿತಿ ಇದುವರೆಗೂ ತಿಳಿದಿಲ್ಲ.