ಶಿಯಾ ನಾಯಕನ ರಾಜಕೀಯ ವಿದಾಯದ ಬೆನ್ನಲ್ಲೇ‌ ಇರಾಕ್‌ನಲ್ಲಿ ಸಂಘರ್ಷ: 20 ಸಾವು – ಹಲವರಿಗೆ ಗಾಯ

Prasthutha|

ಬಗ್ದಾದ್: ಇರಾಕ್‌ನ ಪ್ರಬಲ ಶಿಯಾ ನಾಯಕ ಮುಖ್ತದಾ ಅಲ್ ಸದರ್ ತನ್ನ ರಾಜಕೀಯ ಜೀವನಕ್ಕೆ ಶಾಶ್ವತ ವಿದಾಯ ಘೋಷಿಸಿದ ಬೆನ್ನಲ್ಲೇ ರಾಜಧಾನಿ ಬಗ್ದಾದ್ ರಣಾಂಗಣವಾಗಿದೆ. ಮುಖ್ತದಾ ಅಲ್ ಸದರ್ ಬೆಂಬಲಿಗರು ರಾಜಧಾನಿಯಾದ್ಯಂತ ದಾಂಧಲೆ ನಡೆಸಿದ್ದು, ಪ್ರತಿಸ್ಪರ್ಧಿ ಗುಂಪಿನ ನಡುವೆ ಸಂಘರ್ಷ ನಡೆದಿದೆ.

- Advertisement -

ಘರ್ಷಣೆಯಲ್ಲಿ ಕನಿಷ್ಠ‌ 20 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಸಂಘರ್ಷ ಮುಂದುವರಿದಿರುವ ಹಿನ್ನೆಲೆಯಲ್ಲಿ ಸಾವಿನ‌ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿದೆ.

ರಾತ್ರಿಯಾಗುತ್ತಿದ್ದಂತೆ, ಮೆಷಿನ್-ಗನ್ ಬೆಂಕಿ ಮತ್ತು ಸ್ಫೋಟಗಳು ನಡೆದವು. ಮುಖ್ತದಾ ಬೆಂಬಲಿಗರು ಸರಕಾರಿ ಪ್ರಧಾನ ಕಛೇರಿಗಳು ಮತ್ತು ವಿದೇಶಿ ರಾಯಭಾರ ಕಚೇರಿ ಸಹಿತ ಹಲವು ಸರಕಾರಿ ಕಚೇರಿ ಹೊಂದಿರುವ ಹಸಿರು ವಲಯದ ಬಳಿ ಜಮಾವಣೆಗೊಂಡ ಹಿನ್ನೆಲೆಯಲ್ಲಿ ಅವರನ್ನು ಚದುರಿಸಲು ಸೇನೆ ಗುಂಡಿನ‌ ದಾಳಿ ನಡೆಸಿದೆ ಎಂದು ರಾಯ್ಟರ್ಸ್ ವರದಿ ಮಾಡಿದೆ

- Advertisement -

ಸೇನೆಯ ಬಲಪ್ರಯೋಗ, ಘರ್ಷಣೆಯಲ್ಲಿ ಹಲವರ ಸಾವಿನ ಬೆನ್ನಲ್ಲೆ ಮುಖ್ತದಾ ಅಲ್ ಸದರ್ ರಾಜಧಾನಿಯಲ್ಲಿ ಉಪವಾಸ ಸತ್ಯಾಗ್ರಹ ಘೋಷಿಸಿದ್ದಾರೆ.

ಇರಾನ್‌ನಿಂದ ಹೆಚ್ಚಾಗಿ ಬೆಂಬಲಿತವಾಗಿರುವ ಸದರ್ ಮತ್ತು ಶಿಯಾ ಮುಸ್ಲಿಂ ಪ್ರತಿಸ್ಪರ್ಧಿಗಳ ನಡುವಿನ ರಾಜಕೀಯ ಬಿಕ್ಕಟ್ಟು ಇರಾಕ್‌ನಲ್ಲಿ  ದಶಕಗಳ ಯುದ್ಧ, ನಿರ್ಬಂಧಗಳು, ನಾಗರಿಕ ಕಲಹಗಳಿಗೆ ಎಡೆ ಮಾಡಿಕೊಟ್ಟಿತ್ತು.

ಭ್ರಷ್ಟ ಮತ್ತು ಕೊಳೆಯುತ್ತಿರುವ ಆಡಳಿತ ವ್ಯವಸ್ಥೆಯನ್ನು ಸುಧಾರಿಸಲು ಇತರ ಶಿಯಾ ನಾಯಕರು ಮತ್ತು ಪಕ್ಷಗಳು ವಿಫಲವಾಗಿದ್ದು, ಈ ನಿಟ್ಟಿನಲ್ಲಿ ರಾಜಕೀಯಕ್ಕೆ ಶಾಶ್ವತ ವಿದಾಯ ಘೋಷಿಸಿದ್ದೇನೆ  ಎಂದು ಮುಖ್ತದಾ ಅಲ್ ಸದರ್ ಹೇಳಿದ್ದಾರೆ.

Join Whatsapp