ಇರಾನ್: ಹಳಿ ತಪ್ಪಿದ ರೈಲು, 17 ಮಂದಿ ಸಾವು

Prasthutha|

ಇರಾನ್ : ಪೂರ್ವ ಇರಾನ್ ನಲ್ಲಿ ಬುಧವಾರ ಮುಂಜಾನೆ ಪ್ರಯಾಣಿಕ ಭಾಗಶಃ ರೈಲು ಹಳಿ ತಪ್ಪಿದ್ದು, 17 ಪ್ರಯಾಣಿಕರು ಮೃತಪಟ್ಟಿದ್ದು  ಮತ್ತು ಸುಮಾರು 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.

- Advertisement -

ಇಂದು ಬೆಳಿಗ್ಗೆ ಮಶ್ಹಾದ್ ಮತ್ತು ಯಾಜ್ದ್ ಪಟ್ಟಣಗಳ ನಡುವೆ ಸಂಭವಿಸಿದ್ದು, ಆಂಬ್ಯುಲೆನ್ಸ್ ಗಳು ಮತ್ತು ರಕ್ಷಣಾ ತಂಡಗಳೊಂದಿಗೆ ಮೂರು ಹೆಲಿಕಾಪ್ಟರ್ ಗಳು ಅಪಘಾತದ ಸ್ಥಳಕ್ಕೆ ಆಗಮಿಸಿದೆ ಎಂದು ವರದಿಗಳು ತಿಳಿಸಿವೆ.

ಸುಮಾರು 350 ಪ್ರಯಾಣಿಕರನ್ನು ಹೊತ್ತ ರೈಲು ದುರಂತದ ಬಗ್ಗೆ ಆರಂಭಿಕ ವಿವರಗಳು ಅಸ್ಪಷ್ಟವಾಗಿದ್ದರೂ, ಸಾವುನೋವುಗಳ ಸಂಖ್ಯೆ ಹೆಚ್ಚಾಗಬಹುದು ಎಂದು ವರದಿ ಹೇಳಿದೆ.

- Advertisement -

ರೈಲಿನಲ್ಲಿದ್ದ ಏಳು ಕಾರುಗಳ ಪೈಕಿ ನಾಲ್ಕು ಕಾರುಗಳು ಮರುಭೂಮಿ ನಗರ ತಬಸ್ ಬಳಿ ಮುಂಜಾನೆ ಕತ್ತಲೆಯಲ್ಲಿ ಹಳಿ ತಪ್ಪಿವೆ ಎಂದು ಇರಾನ್ ಸರ್ಕಾರಿ ಟೆಲಿವಿಷನ್ ವರದಿ ಮಾಡಿದೆ. ತಬಾಸ್ ರಾಜಧಾನಿ ಟೆಹ್ರಾನ್ ನಿಂದ ಆಗ್ನೇಯಕ್ಕೆ ಸುಮಾರು 550 ಕಿಲೋಮೀಟರ್ (340 ಮೈಲಿ) ದೂರದಲ್ಲಿದೆ.

ಇರಾನ್ ದೇಶಾದ್ಯಂತ ಸುಮಾರು 14,000 ಕಿಲೋಮೀಟರ್ (8,700 ಮೈಲಿ) ಉದ್ದದ ರೈಲು ಮಾರ್ಗಗಳನ್ನು ಹೊಂದಿದೆ.



Join Whatsapp