ಬೆಂಗರೆಯಲ್ಲಿ 2.25 ಕೋಟಿ ರೂ. ವೆಚ್ಚದಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿ ಕೇಂದ್ರಕ್ಕೆ ಗುದ್ದಲಿ ಪೂಜೆ

Prasthutha: December 22, 2021

3.70 ಕೋಟಿ ರೂ.ಗಳ ಅನುದಾನದಲ್ಲಿ ನಾಡದೋಣಿ ತಂಗಲು ರೇವು ನಿರ್ಮಾಣ ಕಾಮಗಾರಿ

ಬೆಂಗರೆ: ಮಂಗಳೂರು ಮಹಾನಗರ ಪಾಲಿಕೆಯ 60ನೇ ಬೆಂಗರೆ ವಾರ್ಡ್ ನ ತೋಟ ಬೆಂಗರೆಯಲ್ಲಿ ನಾಡ ದೋಣಿ ತಂಗುದಾನ ಮೂರು ಕೋಟಿ ಇಪ್ಪತ್ತ ಐದು ಲಕ್ಷ ರೂ. ವೆಚ್ಚದಲ್ಲಿ ಮತ್ತು ಕಸಬ ಬೆಂಗರೆಯಲ್ಲಿ ಎರಡು ಕೋಟಿ ಇಪ್ಪತ್ತೈದು ಲಕ್ಷ ರೂ.ವೆಚ್ಚದಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಕೌಶಲ್ಯ ಅಭಿವೃದ್ಧಿ ಕಾಮಗಾರಿಗೆ ಮಂಗಳೂರು ದಕ್ಷಿಣ ವಿಧಾನಸಭಾ ಶಾಸಕ ವೇದವ್ಯಾಸ್ ಕಾಮತ್ ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಕಾರ್ಪೊರೇಟರ್ ಮುನೀಬ್ ಬೆಂಗರೆ ಶಾಸಕರಿಗೆ 60ನೇ ಬೆಂಗರೆ ವಾರ್ಡ್ ಒಳಪಡುವ ಸರ್ಕಾರಿ ಶಾಲೆ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಶಾಸಕರಿಗೆ ಮನವಿ ಪತ್ರ ಸಲ್ಲಿಸಿದರು.

ದ.ಕ. ಜಿಲ್ಲೆಯ ಮಂಗಳೂರು ತಾಲೂಕಿನ ಮಂಗಳೂರು ಮಹಾನಗರ ವ್ಯಾಪ್ತಿಯ ಬೆಂಗರೆ 60ನೇ ವಾರ್ಡಿನ ತೋಟ ಬೆಂಗರೆಯಲ್ಲಿ ಸರಕಾರಿ ಪ್ರೌಢ ಶಾಲೆ ಹಾಗು ಕಸಬಾ ಬೆಂಗರೆಯಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 700 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತಿದ್ದು, ಸದ್ಯ ಶಾಲೆಗಳಲ್ಲಿ ಹೈ ಸ್ಕೂಲ್ ತರಗತಿಗಳಲ್ಲಿ 4 ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಲ್ಲಿ ಇನ್ನೂ ಮೂವರು ಶಿಕ್ಷಕರ ಕೊರತೆಯಿದೆ. ಪ್ರಾಥಮಿಕ ಶಾಲೆಯಲ್ಲಿ ನಾಲ್ವರು ಶಿಕ್ಷಕರು ಮಾತ್ರ ಕರ್ತವ್ಯನಿರ್ವಹಿಸುತ್ತಿದ್ದು ಅಲ್ಲಿ ಇಬ್ಬರು ಶಿಕ್ಷಕರ ಅಗತ್ಯವಿದೆ. ಕಸಬಾ ಬೆಂಗರೆಯಲ್ಲಿ 6 ಶಿಕ್ಷಕರು ಅಗತ್ಯವಿದೆ. ಬೆಂಗರೆ ವಾರ್ಡ್ ಅತೀ ಹಿಂದುಳಿದ ಪ್ರದೇಶವಾಗಿದ್ದು ಬಡ ವರ್ಗದ ಜನರು ಹೆಚ್ಚಾಗಿ ವಾಸಿಸುತ್ತಿದ್ದಾರೆ. ಇಲ್ಲಿ ಬಹುತೇಕ ವಿದ್ಯಾರ್ಥಿಗಳು ಸರಕಾರಿ ಶಾಲೆಗಳನ್ನು ಆಶ್ರಯಿಸಿದ್ದಾರೆ. ಪ್ರಸ್ತುತ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಮಾತ್ರವಲ್ಲ ಮೂಲಭೂತ ಸೌಲಭ್ಯಗಳಾದ ಶಾಲಾ ಕಟ್ಟಡ, ಕುಡಿಯುವ ನೀರಿನ ಸಮಸ್ಯೆ, ಮತ್ತು ಆವರಣ ಗೋಡೆಯ ಅಗತ್ಯವಿದ್ದು  ಶಾಸಕರು ಈ ಬೇಡಿಕೆಯನ್ನು ತಕ್ಷಣ ಈಡೇರಿಸಿ ಕೊಡಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಮಹಾ ಜನಾ ಸಭೆ ಅಧ್ಯಕ್ಷ ಕೇಶವ ಕರ್ಕೇರ, ಸ್ಥಳೀಯ ಮುಖಂಡರಾದ ಮೋಹನ್ ಬೆಂಗರೆ, ಶಶಿ ಬೆಂಗರೆ, ಚೇತನ್ ಬೆಂಗರೆ, ಗಂಗಣ್ಣ, ಸಲೀಂ ಬೆಂಗರೆ, ಅಶ್ರಫ್ ಎಸಿ, ಎಚ್. ಶಾದಾಬ್, ಆಸಿಫ್, ಎ.ಕೆ ಜಬ್ಬಾರ್, ಕಬೀರ್ ಬೆಂಗರೆ, ಪಿಜಿ ರಫೀಕ್,  ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರವಿಶಂಕರ್ ಮಿಜಾರು, ಪಾಲಿಕೆ ಸದಸ್ಯ ಮುನೀಬ್ ಬೆಂಗ್ರೆ, ಮುಖಂಡರಾದ ಮೀರಾ ಕರ್ಕೇರಾ, ವಿಜಯ್ ಕುಮಾರ್ ಶೆಟ್ಟಿ, ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕಿ ಸುಶ್ಮಿತಾ, ಪ್ರಮುಖರಾದ ಶಶಿಕುಮಾರ್, ಅಜಿತ್ ಬೆಂಗ್ರೆ, ಸುಶೀಂದ್ರ, ಚೇತನ್ ಬೆಂಗ್ರೆ, ಧನಂಜಯ ಪುತ್ರನ್, ಗಂಗಾಧರ್ ಸಾಲ್ಯಾನ್, ಹೇಮಚಂದ್ರ ಸಾಲ್ಯಾನ್, ಲೋಕೇಶ್ ಬೆಂಗ್ರೆ, ಮಹೇಶ್ ಬೆಂಗ್ರೆ, ಗುತ್ತಿಗೆದಾರರು, ಬಂದರು ಹಾಗೂ ಮೀನುಗಾರಿಕಾ ಇಲಾಖೆ ಹಾಗೂ ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

 
3.70 ಕೋಟಿ ರೂ.ಗಳ ಯೋಜನೆಗಳ ವಿವರ ಇಂತಿವೆ:
  90 ಮೀ. ಉದ್ದದ ನಾಡದೋಣಿ ತಂಗಲು ಬೀಚ್ ಲ್ಯಾಂಡಿಂಗ್, 90 ಮೀ. ಉದ್ದದ ಕಾಂಕ್ರೀಟ್ ರಸ್ತೆ, ನಾಡದೋಣಿ ತಂಗಲು 2.0 ಮೀ ಅಳಕ್ಕೆ ಹೂಳೆತ್ತುವುದು, 56 ಮೀ ಉದ್ದದ 450 ಮೀ.ಮೀ ದಪ್ಪದ 450 ಮಿಮೀ ದಪ್ಪದ ಡಯಾಫ್ರಮ್ ವಾಲ್, 36 ಮೀ ಉದ್ದದ 600 ಮಿಮೀ ದಪ್ಪದ ಡಯಾಡ್ರಮ್ ವಾಲ್, 45 ಮೀ ಉದ್ದದ ಆರ್.ಸಿ.ಸಿ ತಡೆಗೋಡೆ ನಿರ್ಮಾಣ ಕಾಮಗಾರಿ.
 ನಂತರ ಮಾತನಾಡಿದ ಶಾಸಕರು, ನಾಡದೋಣಿಗಳನ್ನು ನಿಲುಗಡೆ ಮಾಡಲು ಇಲ್ಲಿ ಜಾಗದ ಕೊರತೆಯಿತ್ತು. ಇನ್ನೂ ಮುಂದೆ ಈ ತೊಂದರೆ ನಿವಾರಣೆಯಾಗಲಿದೆ. ನಿಗದಿತ ಅವಧಿಯೊಳಗೆ ನಾಡದೋಣಿ ನಿಲುಗಡೆಗೆ ರೇವು ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲಿದೆ .
ಮೂರನೇ ಹಂತದ ಮೀನುಗಾರಿಕಾ ಜೆಟ್ಟಿ ನಿರ್ಮಾಣ ಕಾರ್ಯವು 22 ಕೋಟಿ ರು.ಗಳಲ್ಲಿ ನಡೆಯಲಿದೆ. ಇದಕ್ಕೆ ಟೆಂಡರ್ ಅಂತಿಮ ಹಂತದಲ್ಲಿದೆ, ಇದೂ ಕೂಡ ತಾಂತ್ರಿಕ ಕಾರಣಗಳಿಂದ ವಿಳಂಬವಾಗಿತ್ತು, ಶೀಘ್ರವೇ ಹೊಯಿಗೆ ಬಝಾರ್‍ ನಲ್ಲಿ ಶಿಲಾನ್ಯಾಸ ನೆರವೇರಿಸಲಾಗುತ್ತದೆ.

 94 ಕೋಟಿ ರು.ಗಳಲ್ಲಿ ವಾಣಿಜ್ಯ ಜೆಟ್ಟಿ ನಿರ್ಮಾಣ ಕಾಮಗಾರಿಯೂ ಬೆಂಗರೆಯಲ್ಲಿ ನಡೆಯಲಿದೆ. ಇದರಲ್ಲಿ 65 ಕೋಟಿ ರು. ಜೆಟ್ಟಿ ನಿರ್ಮಾಣಕ್ಕೆ ಹಾಗೂ 29 ಕೋಟಿ ರೂ.ಗಳು ಹೂಳೆತ್ತುವ ಕಾಮಗಾರಿಗೆ ವೆಚ್ಚವಾಗಲಿದೆ. ಈ ಎಲ್ಲ ಕಾಮಗಾರಿಗಳಿಂದ ಬೆಂಗರೆ ಪ್ರದೇಶದಲ್ಲಿ ಉದ್ದಿಮೆ ಮತ್ತು ವ್ಯಾಪಾರದ ಬೆಳವಣಿಗೆಗೆ ಉತ್ತಮ ಅವಕಾಶ ಲಭ್ಯವಾಗಲಿದೆ, ಇದಲ್ಲದೇ ತೇಲುವ ಜಟ್ಟಿ ನಿರ್ಮಿಸುವ ಉದ್ದೇಶ ಹೊಂದಲಾಗಿದೆ ಎಂದು ಶಾಸಕರು ಮಾಹಿತಿ ನೀಡಿದರು.

150 ದೋಣಿ ನಿಲುಗಡೆ:
ಇದೇ ಮೊದಲ ಬಾರಿಗೆ 150ರಷ್ಟು ನಾಡದೋಣಿಗಳಿಗೆ ಇಲ್ಲಿ ತಂಗಲು ಅವಕಾಶ ಸಿಗಲಿದೆ. 90 ಮೀಟರ್ ಉದ್ದಕ್ಕೆ ನಾಡದೋಣಿ ನಿಲುಗಡೆಗೆ ಬೀಚ್ ಲ್ಯಾಂಡಿಂಗ್ ಸೌಲಭ್ಯ ಇರಲಿದೆ ಎಂದು ಬಂದರು ಇಲಾಖೆ ಅಧಿಕಾರಿ ತಿಳಿಸಿದರು.
  ಬಳಿಕ ಶಾಸಕ ವೇದವ್ಯಾಸ ಕಾಮತ್ ಅವರು ಅಲ್ಪ ಸಂಖ್ಯಾತರಿಗೆ ನಿಗಮದಿಂದ ಜನವಿಕಾಸ ಯೋಜನೆಯಡಿ ಮಂಜೂರಾದ 2 ಕೋಟಿ ರೂ.ಗಳ ಕೌಶಲ್ಯಾಭಿವೃದ್ದಿ ಕೇಂದ್ರಕ್ಕೆ ಶಿಲನ್ಯಾಸ ನೆರವೇರಿಸಿದರು.
ಈ ಕೇಂದ್ರದಲ್ಲಿ ಅಲ್ಪ ಸಂಖ್ಯಾತ ಮಹಿಳೆಯರಿಗೆ ಹೊಲಿಗೆ ಹಾಗೂ ಕಂಪ್ಯೂಟರ್ ತರಬೇತಿ ನೀಡಲಾಗುತ್ತದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!