ಲುಲು ಮಾಲ್​ನಲ್ಲಿ ಅಸಭ್ಯವಾಗಿ ವರ್ತಿಸಿದ್ದ ಅಶ್ವಥ್ ನಾರಾಯಣ್ ಅರೆಸ್ಟ್

Prasthutha|

- Advertisement -

ಬೆಂಗಳೂರು: ನಗರದ ಲುಲು ಮಾಲ್​ನಲ್ಲಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ವಿಕೃತಿ ಮೆರೆದ ವ್ಯಕ್ತಿಯ ಬಂಧನವಾಗಿದೆ. ಬಂಧಿತ ನಿವೃತ್ತ ಶಿಕ್ಷಕ
ಬಸವೇಶ್ವರ ನಗರದ ಅಶ್ವಥ್ ನಾರಾಯಣ ಮನೆಗೆ ಬೀಗ ಹಾಕಿ ಎಸ್ಕೇಕ್ ಆಗಿದ್ದನು.

ಇದೀಗ ಪೊಲೀಸರು ಕಾಮುಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಗರದ ಪ್ರತಿಷ್ಠಿತ ಮಾಲ್​ ನಲ್ಲಿ ಲೈಂಗಿಕ ಕಿರುಕುಳನೀಡಿರುವ ವಿಡಿಯೋ ವೈರಲ್ ಆಗಿತ್ತು. ಯಶವಂತ್ ಎಂಬ ಯುವಕ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದರು.

- Advertisement -

ಅಕ್ಟೋಬರ್ 29ರ ಭಾನುವಾರ ಸಂಜೆ ಸುಮಾರು 6.30ರ ವೇಳೆಗೆ ಬೆಂಗಳೂರಿನ ಲೂಲು ಮಾಲ್​ನಲ್ಲಿ ಈ ಘಟನೆ ನಡೆದಿತ್ತು. ವ್ಯಾಪಕ ಆಕ್ರೋಶವನ್ನು ಹುಟ್ಟು ಹಾಕಿದ ಘಟನೆಗೆ ಪೊಲೀಸ್ ದೂರೂ ದಾಖಲಾಗಿತ್ತು.



Join Whatsapp