ಒಂದು ದಿನ ವಿಸ್ತರಣೆಯಾದ ವಿಧಾನಸಭೆ ಅಧಿವೇಶನ

Prasthutha|

ಬೆಂಗಳೂರು: ವಿಧಾನಮಂಡಲ ಅಧಿವೇಶನವನ್ನು ಒಂದು ದಿನ ವಿಸ್ತರಿಸಲಾಗಿದೆ. ಶುಕ್ರವಾರ ಕೊನೆಗೊಳ್ಳಬೇಕಿದ್ದ ವಿಧಾನಮಂಡಲ ಅಧಿವೇಶನವನ್ನು ಒಂದು ದಿನ ವಿಸ್ತರಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗಂಟಲು ನೋವು ಕಾಣಿಸಿಕೊಂಡಿರುವ ಹಿನ್ನೆಲೆ ಹಾಗೂ ಹಲವು ಮಸೂದೆಗಳಿಗೆ ಅನುಮೋದನೆ ದೊರೆಯಬೇಕಿರುವುದರಿಂದ ಸೋಮವಾರವೂ ಅಧಿವೇಶನ ನಡೆಯಲಿದೆ.

- Advertisement -

10 ದಿನಗಳಿಂದ ನಡೆಯುತ್ತಿದ್ದ ವಿಧಾನಮಂಡಲ ಅಧಿವೇಶನ ಶುಕ್ರವಾರದಂದು ಸರಕಾರದ ಉತ್ತರ ಹಾಗೂ ಧನವಿನಿಯೋಗ ಮಸೂದೆಗೆ ಅನುಮೋದನೆ ಮೂಲಕ ಕೊನೆಗೊಳ್ಳಬೇಕಿತ್ತು. ಆದರೆ ಗುರುವಾರ ಕೇಂದ್ರ ಸರಕಾರದ ವಿರುದ್ಧ ರಾಜ್ಯ ಸರಕಾರ ಕೈಗೊಂಡ ನಿರ್ಣಯದ ವಿರುದ್ಧ ವಿಧಾನಸಭೆಯಲ್ಲಿ ಧರಣಿ ಆರಂಭವಾಗಿದ್ದು, ಇತ್ತ ವಿಧಾನಪರಿಷತ್ತಿನಲ್ಲಿ ಹಲವಾರು ಮಸೂದೆಗಳಿಗೆ ಅನುಮೋದನೆ ದೊರೆಯಬೇಕಿದೆ. ಬಜೆಟ್‌ ಮೇಲಿನ ಚರ್ಚೆಗೆ ಸಿಎಂ ಉತ್ತರ ಕೊಡಬೇಕಿದೆ.



Join Whatsapp