ಫೆಲೆಸ್ತೀನ್ ಪರ ಸ್ಟೇಟಸ್ ಹಾಕಿದ್ದಕ್ಕೆ ಹಲ್ಲೆ; ಜನಸ್ನೇಹಿ ಪೊಲೀಸರು ಅಂದ್ರೆ ಇದೇನಾ?: ಅಬ್ದುಲ್ ಮಜೀದ್

Prasthutha|

ಬೆಂಗಳೂರು: ಬಾದಾಮಿ ಪೊಲೀಸ್ ಠಾಣೆಯ ಪೊಲೀಸರು ಫೆಲೆಸ್ತೀನ್ ಪರ ವಾಟ್ಸಾಪ್ ಸ್ಟೇಟಸ್ ಹಾಕಿದ್ದಕ್ಕೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದ್ದು, ಜನಸ್ನೇಹಿ ಪೊಲೀಸರು ಅಂದ್ರೆ ಇದೇನಾ ಎಂದು ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಪ್ರಶ್ನಿಸಿದ್ದಾರೆ.

- Advertisement -


ಫೆಲೆಸ್ತೀನ್ ಪರ ವಾಟ್ಸಾಪ್ ಸ್ಟೇಟಸ್ ಹಾಕಿದ ಹಿನ್ನೆಲೆ ಬಾದಾಮಿ ಪೊಲೀಸ್ ಠಾಣೆಯಲ್ಲಿ ಮುಸ್ಲಿಮ್ ಯುವಕನ ವಿರುದ್ಧ ದೂರು ದಾಖಲಾಗಿತ್ತು. ಈ ಸಂಬಂಧ ಬಾದಾಮಿ ಪಿಎಸ್ ಐ ವಿಠ್ಠಲನಾಯಕ ಹಾಗೂ ಇತರೆ ಕಾನ್ಸ್ಟೇಬಲ್ ಗಳು ವಿಚಾರಣೆ ಹೆಸರಲ್ಲಿ ಯುವಕ ಸೈಯದ್ ಬಾಷಾರನ್ನು ಠಾಣೆಗೆ ಕರೆಸಿ ಮನಬಂದಂತೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.


ಈ ಬಗ್ಗೆ ಎಕ್ಸ್ ಮಾಡಿರುವ ಅಬ್ದುಲ್ ಮಜೀದ್, ಬಾಗಲಕೋಟೆ ಜಿಲ್ಲೆ ಬಾದಾಮಿ ಟೌನ್ ಪೋಲಿಸ್ ಠಾಣೆಯ ಪೊಲೀಸರು, ಫೆಲಿಸ್ತೇನ್ ಪರ ಸ್ಟೇಟಸ್ ಇಟ್ಟಿದ್ದ ಅನ್ನುವ ಕ್ಷುಲ್ಲಕ ಕಾರಣಕ್ಕೆ ಸೈಯದ್ ಭಾಷಾ ಎಂಬ ಯುವಕನನ್ನು, ಸ್ಟೇಷನ್ ನಲ್ಲಿ ಕೂಡಿಹಾಕಿ, ಮಾರಣಾಂತಿಕವಾಗಿ ಹಲ್ಲೆ ನಡೆಸಿರುತ್ತಾರೆ.ಇದು ಅಕ್ಷಮ್ಯ ಮತ್ತು ಅಮಾನವೀಯ. ಬಾದಾಮಿ ಪೊಲೀಸರಿಗೆ ಈ ರೀತಿ ಹಲ್ಲೆ ನಡೆಸಲು ಅಧಿಕಾರ ಕೊಟ್ಟವರು ಯಾರು? ಜನಸ್ನೇಹಿ ಪೊಲೀಸರು ಅಂದರೆ ಇದೇನಾ ಎಂದು ಪ್ರಶ್ನಿಸಿದ್ದಾರೆ.

- Advertisement -


ಈ ಕೂಡಲೇ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸುಮೊಟೊ ಕೇಸು ದಾಖಲಿಸಿ, ಕರ್ತವ್ಯದಿಂದ ಅಮಾನತುಗೊಳಿಸಬೇಕೆಂದು ಮಾನ್ಯ ಎಸ್ ಪಿ ಅವರಿಗೆ ಆಗ್ರಹಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.



Join Whatsapp