ಆಸ್ತಿ ಮಾರಿದ ಹಣಕ್ಕಾಗಿ ತಂದೆ-ತಾಯಿ ಸೇರಿದಂತೆ ಮೂವರ ಮೇಲೆ ಮಚ್ಚಿನಿಂದ ಹಲ್ಲೆ ; ಇಬ್ಬರು ಮೃತ್ಯು

Prasthutha|

ಮೂಡಿಗೆರೆ: ಆಸ್ತಿ ಮಾರಿದ ಹಣಕ್ಕಾಗಿ ತಂದೆ-ತಾಯಿ ಸೇರಿದಂತೆ ಮೂವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಲಾಗಿದ್ದು, ಇಬ್ಬರು ಸಾವನ್ನಪ್ಪಿದ ಘಟನೆ ಮೂಡಿಗೆರೆ ತಾಲೂಕಿನ ಮಧುಗುಂಡಿ ಗ್ರಾಮದಲ್ಲಿ ನಡೆದಿದೆ.

- Advertisement -

ಆಸ್ತಿ ಮಾರಿದ ಹಣಕ್ಕಾಗಿ ಸಂತೋಷ್ ಎಂಬವನು ಆಸ್ತಿ ಮಾರಾಟದ ಮಧ್ಯವರ್ತಿ ಕಾರ್ತಿಕ್ ಎಂಬವನಿಗೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ತಡೆಯಲು ಬಂದ ತಂದೆ ಭಾಸ್ಕರ್ ಗೌಡ ಹಾಗೂ ತಾಯಿ ಮೇಲೆಯೂ ಗಂಭೀರವಾಗಿ ಹಲ್ಲೆ ನಡೆಸಿದ್ದು, ಘಟನೆಯಲ್ಲಿ ಕಾರ್ತಿಕ್ ಹಾಗೂ ತಂದೆ ಭಾಸ್ಕರ್ ಗೌಡ ಸಾವನ್ನಪ್ಪಿದ್ದಾರೆ. ತಾಯಿಯ ಸ್ಥಿತಿ ಗಂಭೀರವಾಗಿದ್ದು, ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊಲೆಯಾದ ಕಾರ್ತಿಕ್, ಆರೋಪಿ ಸಂತೋಷ್ ಗೆ ಸೇರಿದ ಜಮೀನನ್ನು ಮಾರಾಟ ಮಾಡಲು ಮಧ್ಯಸ್ಥಿಕೆ ವಹಿಸಿದ್ದನು. 12‌ ಲಕ್ಷ ಹಣಕಾಸಿನ ವಿಚಾರದಲ್ಲಿ ನಡೆದ ಜಗಳ ಈಗ ಕೊಲೆಯಲ್ಲಿ ಅಂತ್ಯವಾಗಿದೆ.

- Advertisement -

ಬಾಳೂರು‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Join Whatsapp