ಗಂಗಾವತಿ: ಹಂದಿ ಫಾರಂ ಮಾಲಿಕನಿಗೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಐವರು ಆರೋಪಿಗಳನ್ನು ಬಂಧಿಸುವ ವೇಳೆ, ಪೊಲೀಸರಿಗೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ, ಪೊಲೀಸರು ಫೈರಿಂಗ್ ಮಾಡಿದ ಘಟನೆ ತಾಲ್ಲೂಕಿನ ಮುಸ್ಟೂರು ಬಳಿ ಮೇಲೆ ಶುಕ್ರವಾರ ನಡೆದಿದೆ.
ಆರೋಪಿಗಳಾದ ಅಶೋಕ ಬೆಳ್ಳಟ್ಟಿ ಮತ್ತು ಶಂಕರ್ ಸಿಂಧನೂರು ಗಾಯಗೊಂಡಿದ್ದಾರೆ.
ಡಕಾಯಿತಿ ಕೇಸ್ ನ ಐವರು ಆರೋಪಿಗಳು ಪರಾರಿಯಾಗಿದ್ದು, ಅವರನ್ನು ಬಂಧಿಸುವ ವೇಳೆ ಆರೋಪಿಗಳು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಫೈರಿಂಗ್ ಮಾಡಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.