ನಾಪೊಕ್ಲು ಕೊಟ್ಟಮುಡಿ ಜಮಾಅತ್ ಅಧ್ಯಕ್ಷನ ಹತ್ಯೆ | ಆರೋಪಿ ಬಂಧನ
Prasthutha: March 29, 2021

ಮಡಿಕೆರಿಯ ನಾಪೊಕ್ಲು ಕೊಟ್ಟಮುಡಿ ಜಮಾಅತ್ ಅಧ್ಯಕ್ಷ ಹಾರಿಸ್ ಎಂಬವರನ್ನು ಹತ್ಯೆಗೈದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಹಾರಿಸ್ ನೊಂದಿಗೆ ವ್ಯಾಪಾರ ಮಾಡುತ್ತಿದ್ದ ಹಮೀದ್ ನಡುವೆ ಹಣಕಾಸಿಗೆ ಸಂಬಂಧಪಟ್ಟ ವಿಚಾರದಲ್ಲಿ ಉಂಟಾದ ಧ್ವೇಷವೇ ಹತ್ಯೆಗೆ ಕಾರಣವಾಗಿದೆ ಎನ್ನಲಾಗಿದೆ.
ಕೊಡಗು ಜಿಲ್ಲೆಯ ಮೂರ್ನಾಡು ಗ್ರಾಮದವನಾದ ಹಮೀದ್ ಕಳೆದ 20 ವರ್ಷಗಳಿಂದ ಪಿರಿಯಾಪಟ್ಟಣದ ಚೌಡೇನಹಳ್ಳಿಯಲ್ಲಿ ವ್ಯಾಪಾರ ನಡೆಸುತ್ತಿದ್ದ ಹಾರಿಸ್ ನೊಂದಿಗೆ ವಹಿವಾಟು ನಡೆಸುತ್ತಿದ್ದ ಎಂದು ತಿಳಿದುಬಂದಿದೆ. ಹಮೀದ್ ನ ವ್ಯಾಪಾರಕ್ಕೆ ಹಾರಿಸ್ ಹಣಕಾಸಿನ ನೆರವು ಕೂಡ ನೀಡಿದ್ದರು ಎಂದು ಸ್ಥಳೀಯರು ಹೇಳುತ್ತಾರೆ. ಇತ್ತೀಚೆಗೆ ಹಣಕಾಸಿನ ವಿಚಾರದಲ್ಲಿ ಇವರಿಬ್ಬರ ನಡುವೆ ಉಂಟಾದ ಧ್ವೇಷದಿಂದ ಹಮೀದ್ ಹಾರಿಸ್ ನನ್ನು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.
