ಅಸ್ಸಾಮ್ | ಪೊಲೀಸ್ ಕಸ್ಟಡಿಯಲ್ಲಿ ಮುಸ್ಲಿಮ್ ವ್ಯಕ್ತಿ ಸಾವು; ಪತ್ನಿ, ಮಗಳ ವಿರುದ್ಧ UAPA ಪ್ರಕರಣ ದಾಖಲು

Prasthutha|

ಗುವಾಹಟಿ: ಅಸ್ಸಾಮ್ ನಲ್ಲಿ ಮೀನು ವ್ಯಾಪಾರಿ ಶಫೀಕುಲ್ ಇಸ್ಲಾಮ್ ಎಂಬವರ ಪೊಲೀಸ್ ಕಸ್ಟಡಿ ಹತ್ಯೆಗೆ ಸಂಬಂಧಿಸಿದಂತೆ ಮೃತನ ಪತ್ನಿ ರಶೀದಾ ಖಾತುನ್ ಮತ್ತು ಮಗಳ ವಿರುದ್ಧ UAPA ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ಬಂಧಿಸಿದ್ದಾರೆ.

- Advertisement -

ಶಫೀಕುಲ್ ಇಸ್ಲಾಮ್ ಎಂಬವರ ಪೊಲೀಸ್ ಕಸ್ಟಡಿ ಹತ್ಯೆಯನ್ನು ವಿರೋಧಿಸಿ ಬಟದ್ರಬಾ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಆರೋಪದಲ್ಲಿ ಮೃತನ ಪತ್ನಿ ಮತ್ತು ಮಗಳು ಸೇರಿದಂತೆ ಕನಿಷ್ಠ 6 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಮಧ್ಯೆ ಮೃತನ ಪತ್ನಿ, ಮಗಳು ಸೇರಿದಂತೆ ಹಲವರು ಸ್ಥಳೀಯ ಠಾಣೆಗೆ ಬೆಂಕಿ ಹಚ್ಚುತ್ತಿರುವುದು ವೀಡಿಯೋ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಲೀನಾ ಡೋಲಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

- Advertisement -

ಸದ್ಯ ಆರೋಪಿಗಳಿಗೆ ಬಾಂಗ್ಲಾದೇಶದ ನಿಷೇಧಿತ ಸಂಘಟನೆಯಾದ ಅನ್ಸಾರುಲ್ಲಾ ತಂಡದೊಂದಿಗೆ ಸಂಪರ್ಕ ಹೊಂದಿರುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಈ ಮಧ್ಯೆ ಬಾಲನ್ಯಾಯ ನಿಯಮಗಳ ಅನ್ವಯ ಅಪ್ರಾಪ್ತ ಬಾಲಕಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಫೀಕುಲ್ ಇಸ್ಲಾಮ್ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಮೃತನ ಮನೆ ಸೇರಿದಂತೆ ಹಲವು ಮುಸ್ಲಿಮರ ಮನೆಗಳನ್ನು ಜಿಲ್ಲಾಡಳಿತ ಕೆಡವಿ ಹಾಕಿತ್ತು.



Join Whatsapp